Friday, April 26, 2024
Homeತಾಜಾ ಸುದ್ದಿಖ್ಯಾತ, ರೂಪದರ್ಶಿ ಶವವಾಗಿ ಪತ್ತೆ

ಖ್ಯಾತ, ರೂಪದರ್ಶಿ ಶವವಾಗಿ ಪತ್ತೆ

spot_img
- Advertisement -
- Advertisement -

ಮುಂಬೈ : ಖ್ಯಾತ, ರೂಪದರ್ಶಿ ಶವವಾಗಿ ಪತ್ತೆಯಾಗಿರುವ ಘಟನೆ ಮುಂಬನಲ್ಲಿ ನಡೆದಿದೆ. ನಟ ಮತ್ತು ರೂಪದರ್ಶಿ ಆದಿತ್ಯ ಸಿಂಗ್ ರಜಪೂತ್ ಅವರು ತಮ್ಮ 11ನೇ ಮಹಡಿಯ ಎತ್ತರದ ಕಟ್ಟಡದ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಸಲಿಗೆ ನಟನ ಮನಗೆ ಆತನ ಸ್ನೇಹಿತ ಆಗಮಿಸಿದ್ದು, ಆತ ಶೌಚಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರೋದನ್ನ ಕಂಡುಕೊಂಡಿದ್ದಾನೆ.

ನಂತ್ರ ಕಟ್ಟಡದ ಭದ್ರತಾ ಸಿಬ್ಬಂದಿ ಸಹಾಯದಿಂದ ಪಕ್ಕದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ, ಆಸ್ಪತ್ರೆಯಲ್ಲಿ ನಟ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ, ಸಾವಿಗೆ ಕಾರಣ ಡ್ರಗ್ ಓವರ್ಡೋಸ್ ಆಗಿರಬಹುದು.

ಅಂದ್ಹಾಗೆ, ಆದಿತ್ಯ ದೆಹಲಿ ಮೂಲದವರಾಗಿದ್ದು, ರೂಪದರ್ಶಿಯಾಗಿ ತಮ್ಮ ವೃತ್ತಿಜೀವನವನ್ನ ಪ್ರಾರಂಭಿಸಿದರು. ಕ್ರಾಂತಿವೀರ್ ಮತ್ತು ಮೈನೆ ಗಾಂಧಿ ಕೋ ನಹೀನ್ ಮಾರಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದು, ಅವರು ಸುಮಾರು 300 ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಸ್ಪ್ಲಿಟ್ಸ್ವಿಲ್ಲಾ 9ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದು, ಲವ್, ಆಶಿಕಿ, ಕೋಡ್ ರೆಡ್, ಆವಾಜ್ ಸೀಸನ್ 9, ಬ್ಯಾಡ್ ಬಾಯ್ ಸೀಸನ್ 4 ಮತ್ತು ಇತರ ಟಿವಿ ಯೋಜನೆಗಳಲ್ಲಿ ಕೂಡ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!