Friday, May 3, 2024
Homeಕರಾವಳಿಉಜಿರೆ :ಪಾದಯಾತ್ರೆಗೆ ಬಂದ ಯಾತ್ರಿಕರ ಮೊಬೈಲ್ ಕಳ್ಳತನ, ಬೆನ್ನಟ್ಟಿ ಹಿಡಿದು ಹಿಗ್ಗಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ...

ಉಜಿರೆ :ಪಾದಯಾತ್ರೆಗೆ ಬಂದ ಯಾತ್ರಿಕರ ಮೊಬೈಲ್ ಕಳ್ಳತನ, ಬೆನ್ನಟ್ಟಿ ಹಿಡಿದು ಹಿಗ್ಗಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

spot_img
- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರದ ಧರ್ಮಸ್ಥಳಕ್ಕೆ ಶಿವರಾತ್ರಿಗೆ ಪಾದಯಾತ್ರೆಗೆ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿದ್ದು ಅದರಲ್ಲೂ ಕಳ್ಳರ ಕೈಚಳಕ ಕೂಡ ಇದೆ .

ಇಂದು ಭಾನುವಾರ ರಾತ್ರಿ ಉಜಿರೆ ಜನಾರ್ಧನ ದೇವಸ್ಥಾನದ ಪಕ್ಕ ಪಾದಯಾತ್ರಿಗಳಿಗೆ ಶೌಚಾಲಯ ನೀಡಿದ್ದು ಅಲ್ಲಿದ್ದ ಯಾತ್ರಿಕರ ಬಳಿ ಬಂದು ಓರ್ವ ಅಪರಿಚಿತ ವ್ಯಕ್ತಿ ಕರೆ ಮಾಡಲು ಮೊಬೈಲ್ ಕೊಡಿ ಎಂದು ಹೇಳಿದ್ದು ನಂತರ ಇದರಲ್ಲಿ ಕರೆ ಹೋಗಲ್ಲ ಇನ್ನೊಂದು ಮೊಬೈಲ್ ಕೊಡಿ ಎಂದು ಹೇಳಿ ಎರಡು ಮೊಬೈಲ್ ಪಡೆದು ಅಲ್ಲಿದ್ದ ಪರಾರಿಯಾಗಿದ್ದ.

ಇದನ್ನು ಅರಿತ ಯಾತ್ರಿಕರು ಸ್ಥಳೀಯರಿಗೆ‌ ಮಾಹಿತಿ ನೀಡಿ ಎಲ್ಲರು ಸೇರಿ ಕಳ್ಳನನ್ನು ಹಿಂಬಾಲಿಸಿ ಉಜಿರೆ ಬಸ್ ನಿಲ್ದಾಣದ ಬಳಿಯ ದುರ್ಗಾ ಟೆಕ್ಸ್ ಟೈಲ್ ಬದಿಯಲ್ಲಿ ಹಿಡಿದು ಹಿಗ್ಗಮುಗ್ಗ ಥಳಿಸಿ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಬಂದು ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು ವಿಚಾರಣೆಗೆ ಒಳಪಡಿಸಲಾಯಿತು.

- Advertisement -
spot_img

Latest News

error: Content is protected !!