Wednesday, June 26, 2024
Homeಕರಾವಳಿಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಸಾರ್ವಜನಿಕರ ಕಡತಗಳು ಸರಿಯಾಗಿ ವಿಲೇವಾರಿ ಆಗುತ್ತಿಲ್ಲವೆಂಬ ಆರೋಪ: ಕಚೇರಿಗೆ ಭೇಟಿ...

ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಸಾರ್ವಜನಿಕರ ಕಡತಗಳು ಸರಿಯಾಗಿ ವಿಲೇವಾರಿ ಆಗುತ್ತಿಲ್ಲವೆಂಬ ಆರೋಪ: ಕಚೇರಿಗೆ ಭೇಟಿ ಕೊಟ್ಟ ಪರಿಶೀಲಿಸಿದ ಶಾಸಕ ರಾಜೇಶ್ ನಾಯ್ಕ್

spot_img
- Advertisement -
- Advertisement -

ಮಂಗಳೂರು:ನಿರೀಕ್ಷಕರ ಕಚೇರಿಯಲ್ಲಿ ಸಾರ್ವಜನಿಕರ ಕಡತಗಳು ಸಮಯಕ್ಕೆ ಸರಿಯಾಗಿ  ವಿಲೇವಾರಿ ಆಗದೆ ತೊಂದರೆಯಾಗುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.  

ಪಾಣೆಮಂಗಳೂರು ಹೋಬಳಿಯ ಕಂದಾಯ ನಿರೀಕ್ಷಕ ರಾಮಕಾಟಿಪಳ್ಳ ಅವರ ಕಚೇರಿಯಲ್ಲಿ ಸಮಯಕ್ಕೆ ಸರಿಯಾಗಿ ಸಾರ್ವಜನಿಕರ ಕಡತಗಳು ವಿಲೇವಾರಿ ಆಗದೆ ಜನರು ಪದೇ ಪದೇ ಮಿನಿವಿಧಾನ ಸೌಧದಲ್ಲಿರುವ ಕಚೇರಿಗೆ ಆಗಮಿಸುವಂತಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಾಸಕರು ತಹಶಿಲ್ದಾರ್ ರಶ್ಮಿ. ಎಸ್ .ಆರ್ .ಅವರ ಜೊತೆಯಲ್ಲಿ ದಿಢೀರ್ ಭೇಟಿ ನೀಡಿದರು.

‘ಯಾವುದೇ ಕಾರಣದಲ್ಲಾದರೂ ಬಾಕಿಯಾಗಿರುವ ಎಲ್ಲಾ ಕಡತಗಳನ್ನು ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ವಿಲೇವಾರಿ ಮಾಡಿ ಜನರು ಪದೇ ಪದೇ ಕಚೇರಿ ಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಮಾಡಬೇಡಿ, ತಾಂತ್ರಿಕ ಕಾರಣಗಳಿಂದ ಸಮಸ್ಯೆ ಗಳುಂಟಾದಾಗ ಜನರನ್ನು ಕರೆದು ಅವರಿಗೆ ಸಮಸ್ಯೆ ಯ ಬಗ್ಗೆ ತಿಳಿಸುವ ಕೆಲಸ ಆಗಬೇಕು. ಕಚೇರಿ ಗೆ ಸಮಸ್ಯೆಗಳನ್ನು ಹಿಡಿದುಕೊಂಡು ಬರುವ ಪ್ರತಿಯೊಬ್ಬರಿಗೂ ಉತ್ತಮ ಸ್ಪಂದನೆ ನೀಡಿ ಎಂದು ಕಿವಿಮಾತು ಹೇಳಿದರು.

 ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ವಿನಾಕಾರಣ ಜನರನ್ನು ಕಚೇರಿ ಗೆ ಅಲೆದಾಡುವಂತೆ ಮಾಡಬೇಡಿ. ಜನರ ಸೇವೆ ಮಾಡಿದರೆ ನಿಮ್ಮನ್ನು ಕೊನೆಯವರಗೂ ನೆನಪಿಟ್ಟುಕೊಳ್ಳುತ್ತಾರೆ ,  ಉದಾಸೀನ ಮನೋಭಾವ ಬಿಟ್ಟು ಕಷ್ಟವನ್ನು ಹೇಳಿಕೊಂಡು ನಿಮ್ಮ ಬಳಿ ಬರುವ ಜನರ ಕೆಲಸ ಮಾಡಿಕೊಡಿ ಎಂದು ಅವರು ಸೂಚನೆ ನೀಡಿದರು. ಸ್ಥಳದಲ್ಲಿ ತಹಶಿಲ್ದಾರ್ ರಶ್ಮಿ ಅವರಲ್ಲಿ ಕಂದಾಯ ಇಲಾಖೆಯ ಮಾಹಿತಿ ಪಡೆದುಕೊಂಡ ಅವರು ಮುಂದಿನ ದಿನಗಳಲ್ಲಿ ಸಾರ್ವಜನಿಕ ರಿಂದ ಯಾವುದೇ ರೀತಿಯ ದೂರುಗಳು ಬರದ ರೀತಿಯಲ್ಲಿ ಕೆಲಸ ಆಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಆಪ್ತ ಸಹಾಯಕ ಪವನ್ ಕುಮಾರ್ ಹಾಜರಿದ್ದರು.

- Advertisement -
spot_img

Latest News

error: Content is protected !!