ಮಂಗಳೂರು: ಹೊರವಲಯದ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಜಪೆ ಗ್ರಾಮ ಕೊಂಚಾರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇಬ್ಬರು ಯುವತಿಯರು ನಾಪತ್ತೆಯಾದ ಪ್ರಕರಣವನ್ನು ಬಜ್ಪೆ ಪೋಲಿಸರು ಭೇದಿಸಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.
ಬಜಪೆ ಗ್ರಾಮ ಕೊಂಚಾರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಾಮು ಎಂಬವರ ಮೂರು ಜನ ಮಕ್ಕಳ ಪೈಕಿ ಮುಬೀನಾ ( 22 ) ಮತ್ತು ಬುಶ್ರಾ ( 21 ) ಎಂಬವರು ಕಳೆದ ದಿನಾಂಕ 07 ರಂದು ರಾತ್ರಿ ಸುಮಾರು 00:30 ಗಂಟೆಗೆ ಊಟ ಮಾಡಿ ಮನೆಯಲ್ಲಿ ಮಲಗಿದ್ದವರು ನಂತರ ಮುಂಜಾನೆ 02:00 ಗಂಟೆಗೆ ಮನೆಯವರು ಎದ್ದು ನೋಡಿದಾಗ ನಾಪತ್ತೆಯಾಗಿದ್ದರು.
ಈ ಬಗ್ಗೆ ಪೋಷಕರು ನೀಡಿದ ದೂರಿನಂತೆ ಬಜಪೆ ಪೊಲೀಸ್ ಠಾಣೆಯಲ್ಲಿ ಯುವತಿಯರು ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಾಪತ್ತೆಯಾಗಿರುವ ಇಬ್ಬರು ಯುವತಿಯರ ಪತ್ತೆಯ ಬಗ್ಗೆ ದೃಢಸಂಕಲ್ಪ ಹೊಂದಿದ್ದ ಬಜಪೆ ಪೊಲೀಸ್ ಠಾಣೆಯ ಪೊಲೀಸ ನಿರೀಕ್ಷಕರಾದ ಸಂದೇಶ ಪಿ.ಜೆ ರವರ ತಂಡ ನಾಪತ್ತೆಯಾಗಿದ್ದ ಇಬ್ಬರು ಯುವತಿಯರನ್ನು ನಾಪತ್ತೆಯಾದ 2 ದಿನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜಾವಗಲ್ ಎಂಬಲ್ಲಿ ಸುರಕ್ಷಿತವಾಗಿ ಪತ್ತೆ ಮಾಡಿದ್ದಾರೆ.
ಬಜಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ರವರ ನೇತೃತ್ವದಲ್ಲಿ ಪಿ.ಎಸ್.ಐ ರಾಘವೇಂದ್ರ ನಾಯ್ಕ, ಸಿಬ್ಬಂದಿಯವರಾದ ಎ.ಎಸ್.ಐ ರಾಮ ಪೂಜಾರಿ, ರಾಮ ನಾಯ್ಕ, ಸಂತೋಷ, ರಶೀದ ಶೇಖ್, ಸುಜನ, ಸಿದ್ದಲಿಂಗಯ್ಯ, ಉಮೇಶ ಕೆ. ಮತ್ತು ಅಕ್ಷತಾರವರು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.