Thursday, June 4, 2026
Homeಕರಾವಳಿಧರ್ಮಸ್ಥಳದಲ್ಲಿ ಬಾಲಕಿ ಪತ್ತೆ ಪ್ರಕರಣ; ಮಗುವನ್ನು ಹೆತ್ತವರ ಮಡಿಲು ಸೇರಿಸಿದ ಪೊಲೀಸರು

ಧರ್ಮಸ್ಥಳದಲ್ಲಿ ಬಾಲಕಿ ಪತ್ತೆ ಪ್ರಕರಣ; ಮಗುವನ್ನು ಹೆತ್ತವರ ಮಡಿಲು ಸೇರಿಸಿದ ಪೊಲೀಸರು

- Advertisement -
- Advertisement -

ಧರ್ಮಸ್ಥಳ : ನಿನ್ನೆ ಧರ್ಮಸ್ಥಳ ಆರು ವರ್ಷದ ಹೆಣ್ಣು ಮಗುವನ್ನು ಬಿಟ್ಟು ಪೋಷಕರು ನಾಪತ್ತೆಯಾಗಿದ್ದರು. ಇದೀಗ ಕೊನೆಗೂ ಧರ್ಮಸ್ಥಳ ಪೊಲೀಸರು ಬಾಲಕಿಯ ಹೆತ್ತವರನ್ನು ಪತ್ತೆ ಹಚ್ಚಿ ಮನೆಯವರೊಂದಿಗೆ ಆಕೆಯನ್ನು ಕಳುಹಿಸಿದ್ದಾರೆ. ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹೆತ್ತವರನ್ನು ಹುಡುಕಿ ಮಗುವನ್ನು ಹೆತ್ತವರ ಮಡಿಲಿಗೆ ಸೇರಿದ್ದಾರೆ.

ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆಂದು ಏ.22 ರಂದು ಬೆಳಗ್ಗೆ ಬಂದಿದ್ದು ಈ ವೇಳೆ ಮಗುವನ್ನು ಬಿಟ್ಟು ಪೋಷಕರು ನಾಪತ್ತೆಯಾಗಿದ್ದರು. ಮಗು ಆಳುತ್ತಿದ್ದದ್ದನ್ನು  ಗಮನಿಸಿದ ಭಕ್ತರು ಧರ್ಮಸ್ಥಳ ಮಾಹಿತಿ ಕಚೇರಿಗೆ ತಲುಪಿಸಿ ವಿಚಾರಿಸಿದಾಗ ಮನೆಯವರು ಮಿಸ್ ಅಗಿರುವ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ ಅವರು ಮಗುವನ್ನು ರಕ್ಷಣೆ ಮಾಡಿದ್ದರು. ಇದೀಗ ಮಗುವನ್ನು ಹೆತ್ತವರಿಗೆ ಒಪ್ಪಿಸಲಾಗಿದೆ.

- Advertisement -

Latest News

error: Content is protected !!