Thursday, June 4, 2026
Homeತಾಜಾ ಸುದ್ದಿಕೇರಳ: ಭೀಕರ ರಸ್ತೆ ಅಪಘಾತದಲ್ಲಿ ಟಾಪ್ ಮಾಡೆಲ್ ಗಳಿಬ್ಬರು ಸಾವು

ಕೇರಳ: ಭೀಕರ ರಸ್ತೆ ಅಪಘಾತದಲ್ಲಿ ಟಾಪ್ ಮಾಡೆಲ್ ಗಳಿಬ್ಬರು ಸಾವು

- Advertisement -
- Advertisement -

ಕೊಚ್ಚಿ: 2019ರಲ್ಲಿ ಮಿಸ್​ ಕೇರಳ ಕಿರೀಟ ಮುಡಿಗೇರಿಸಿಕೊಂಡಿದ್ದ 25 ವರ್ಷದ ಅನ್ಸಿ ಕಬೀರ್ ಕೊಚ್ಚಿಯಲ್ಲಿ ಸಂಭವಿಸಿದ​ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇವರ ಜೊತೆಯಲ್ಲಿ ಇದೇ ಸ್ಪರ್ಧೆಯಲ್ಲಿ ರನ್ನರ್​ ಅಪ್​ ಸ್ಥಾನ ಪಡೆದಿದ್ದ 26 ವರ್ಷದ ಅಂಜನಾ ಶಾಜಾನ್​​ ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ದುರಂತ ಸಂಭವಿಸಿದೆ.

ಸೋಮವಾರ ಮಧ್ಯರಾತ್ರಿ ವೇಳೆ ಕಾರು ನಿಯಂತ್ರಣ ತಪ್ಪಿದ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿದೆ. ಇವರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಇನ್ನೊಂದು ವಿಚಿತ್ರ ವಿಚಾರ ಅಂದರೆ ಇದೇ ಅನ್ಸಿ ಕಬೀರ್​ ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ಬಿಳಿ ಬಣ್ಣದ ವಸ್ತ್ರದಲ್ಲಿ ಹಸಿರು ರಾಶಿಯ ಮಧ್ಯೆ ನಿಂತ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದರು. ಈ ಫೋಟೋಗೆ ‘ಹೋಗುವ ಸಮಯ ಬಂದಿದೆ'(ಇಟ್ಸ್​ ಟೈಂ ಟು ಗೋ) ಎಂದು ಬರೆದುಕೊಂಡಿದ್ದರು. ಇದೀಗ ಅನ್ಸಿ ಬಾರದ ಲೋಕಕ್ಕೆ ತೆರಳಿದ್ದಾರೆ..!

ವಿಷಯ ತಿಳಿದು ತಾಯಿಯು ಆತ್ಮಹತ್ಯೆಗೆ ಯತ್ನ

ಅಪಘಾತದ ವಿಷಯ ತಿಳಿದು ಮೃತ ಅನ್ಸಿ ಕಬೀರ್ ತಾಯಿ ರಸಿನಾ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

- Advertisement -

Latest News

error: Content is protected !!