Wednesday, June 3, 2026
Homeಕರಾವಳಿವಿಟ್ಲದಲ್ಲಿ ಅಂಗಡಿಯೊಂದರ ಶಟರ್ ಮೇಲೆ “Name Jihad” ಎಂದು ಬರೆದ ಕಿಡಿಗೇಡಿಗಳು

ವಿಟ್ಲದಲ್ಲಿ ಅಂಗಡಿಯೊಂದರ ಶಟರ್ ಮೇಲೆ “Name Jihad” ಎಂದು ಬರೆದ ಕಿಡಿಗೇಡಿಗಳು

- Advertisement -
- Advertisement -

ವಿಟ್ಲ; ಇಲ್ಲಿನ ಹೃದಯಭಾಗದಲ್ಲಿರುವ ದೀಪಕ್ ವಾಚ್ ವರ್ಕ್ಸ್ ಶಾಪ್ ನ ಶಟರ್ ಮೇಲೆ ಕಿಡಿಗೇಡಿಗಳು “Name Jihad” ಎಂದು ಬರೆದಿದ್ದಾರೆ.

ಅ.11 ರಂದು ರಾತ್ರಿ ವೇಳೆ ಘಟನೆ ನಡೆದಿದ್ದು, ಮರುದಿನ ಅಂಗಡಿ ಮಾಲೀಕರು ಬಾಗಿಲು ತೆಗೆಯಲು ಬಂದು ನೋಡಿದಾಗ ಬರಹ ಕಂಡು ಬಂದಿದೆ ಎನ್ನಲಾಗಿದೆ.ಈ ಬಗ್ಗೆ ಅಂಗಡಿ ಮಾಲೀಕ ಅಬ್ದುಲ್ಲರವರು ನಿನ್ನೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಯಾರೋ ಇಬ್ಬರು ಬರುತ್ತಿರುವುದು ಕಂಡು ಬಂದಿದೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!