Friday, July 11, 2025
Homeಕರಾವಳಿಉಡುಪಿಉಡುಪಿಯಲ್ಲಿ ಎಂಐಓ ಕ್ಯಾನ್ಸರ್ ಡೇ ಕೇರ್ ಸೆಂಟರ್ ಕಾರ್ಯಾರಂಭ

ಉಡುಪಿಯಲ್ಲಿ ಎಂಐಓ ಕ್ಯಾನ್ಸರ್ ಡೇ ಕೇರ್ ಸೆಂಟರ್ ಕಾರ್ಯಾರಂಭ

spot_img
- Advertisement -
- Advertisement -

ಉಡುಪಿ: ಮಂಗಳೂರಿನಲ್ಲಿ ಕಳೆದ 12 ವರ್ಷಗಳಿಂದ ಕ್ಯಾನ್ಸರ್ ರೋಗಿಗಳ ಆಶಾಕಿರಣವಾಗಿ, ಬಡವರು ಸೇರಿದಂತೆ ಎಲ್ಲಾ ರೀತಿಯ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿ ಜಪ್ರಿಯಗೊಂಡಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಕ್ಯಾನ್ಸರ್ ಡೇ ಕೇರ್ ಸೆಂಟರ್ ಉಡುಪಿಯಲ್ಲಿ ಕಾರ್ಯಾರಂಭ ಮಾಡಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಸುರೇಶ್ ರಾವ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗಿಗಳಿಗೆ ಮಾತ್ರ ಮೀಸಲಾದ ಈ ಆಸ್ಪತ್ರೆ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ರೋಗಿಗಳಿಗೆ ಅನುಕೂಲವಾಗಲಿದೆ. ಎಂಐಓ ಮಂಗಳೂರು ಕೇಂದ್ರದ ಎಲ್ಲಾ ಸೇವೆಗಳು ಇಲ್ಲೂ ಲಭ್ಯವಿರಲಿವೆ. ಅಲ್ಲಿನ ಹಿರಿಯ ಕ್ಯಾನ್ಸರ್ ತಜ್ಞವೈದ್ಯರು ರೋಗಿಗಳ ಸಂದರ್ಶನಕ್ಕೆ ಪ್ರತಿದಿನ ಇಲ್ಲೂ ಲಭ್ಯರಿರಲಿದ್ದಾರೆ. ರೋಗಿಯ ಕುಟುಂಬದವರು ಇಲ್ಲಿಯೇ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಬಹುದು ಎಂದರು.

- Advertisement -
spot_img

Latest News

error: Content is protected !!