Wednesday, June 26, 2024
Homeಕರಾವಳಿಉಡುಪಿನರರೋಗ ತಜ್ಞ ಡಾ. ರಾಜಾ ನಿಧನಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಹೆಬ್ಬಾಳ್ಕರ್ ಸಂತಾಪ

ನರರೋಗ ತಜ್ಞ ಡಾ. ರಾಜಾ ನಿಧನಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಹೆಬ್ಬಾಳ್ಕರ್ ಸಂತಾಪ

spot_img
- Advertisement -
- Advertisement -

ಉಡುಪಿ: ಮಣಿಪಾಲದ ಪ್ರಖ್ಯಾತ ನರರೋಗ ತಜ್ಞರಾಗಿದ್ದ ಡಾಕ್ಟರ್ ಎ. ರಾಜಾ (73) ಅವರ ನಿಧನಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ ಸೂಚಿಸಿದ್ದಾರೆ.

ಸಾವಿರಾರು ರೋಗಿಗಳಿಗೆ ಉಪಚಾರ ಮಾಡಿರುವ ಅಗಲಿದ ಆ ದಿವ್ಯ ಆತ್ಮಕ್ಕೆ ಶಾಂತಿ ಸಿಗಲಿ, ಮೃತರ ಕುಟುಂಬ ವರ್ಗ ಮತ್ತು ಅಭಿಮಾನಿ ಬಳಗಕ್ಕೆ ಅವರ ಸಾವಿನ ನೋವಿನ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವೆ ಎಂದು ಸಚಿವೆ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಸುಮಾರು 30 ವರ್ಷಗಳ ಕಾಲ ಕೆಎಂಸಿ ಆಸ್ಪತ್ರೆ ಮಣಿಪಾಲ ಹಾಗೂ 15 ವರ್ಷ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ದಿ. ಡಾ. ರಾಜಾ ಅವರು ಸೇವೆ ಸಲ್ಲಿಸಿದ್ದರು.

ಭಾನುವಾರ ಮುಂಜಾನೆ ರಾಜೀವ ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತಕ್ಕೊಳಗಾದ ಡಾ. ರಾಜಾ ಅವರನ್ನು ಕೂಡಲೇ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.‌

ಡಾ. ರಾಜಾ ಪತ್ನಿ‌ ಮತ್ತು ಪುತ್ರಿಯನ್ನು ಅಗಲಿದ್ದಾರೆ

- Advertisement -
spot_img

Latest News

error: Content is protected !!