Wednesday, June 3, 2026
Homeಕರಾವಳಿಸುರತ್ಕಲ್ ಬೀಚ್ ನಲ್ಲಿ ಸಚಿವರ ಮಾರ್ನಿಂಗ್ ವಾಕ್!

ಸುರತ್ಕಲ್ ಬೀಚ್ ನಲ್ಲಿ ಸಚಿವರ ಮಾರ್ನಿಂಗ್ ವಾಕ್!

- Advertisement -
- Advertisement -

ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ. ಅಶ್ವಥ್ ನಾರಾಯಣ ಇಂದು ಬೆಳಗ್ಗೆ ಸುರತ್ಕಲ್ ಬೀಚ್ ನಲ್ಲಿ ವಾಯು ವಿಹಾರ ನಡೆಸಿದರು.‌

ನಂತರ ಸುರತ್ಕಲ್‌ನಲ್ಲಿರುವ ಎನ್ ಐಟಿಕೆಗೆ
ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿ ಜತೆ ಸಚಿವ ಅಶ್ವಥ್ ನಾರಾಯಣ ಸಂವಾದ ನಡೆಸಿದರು.

ಅನಂತರ ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಸಂಜೀವಿನಿ ಒಕ್ಕೂಟಗಳ ಮಹಿಳಾ ಸದಸ್ಯರ ಸಮಾವೇಶದಲ್ಲಿ ಪಾಲ್ಗೊಂಡ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವರೂ ಆಗಿರುವ ಡಾ. ಅಶ್ವಥ್ ನಾರಾಯಣ, ಕರಕುಶಲ ವಸ್ತುಗಳು, ಆಹಾರೋತ್ಪನ್ನ ತಯಾರಿಸಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಮಹಿಳೆಯರ ಜತೆ ಸಂವಾದ ನಡೆಸಿದರು.

ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!