Friday, April 26, 2024
Homeತಾಜಾ ಸುದ್ದಿಸಚಿವ ಡಾ.ಸುಧಾಕರ್ ತಂದೆಗೆ ಕೊರೋನಾ ಪಾಸಿಟಿವ್ : ಆತಂಕದಲ್ಲಿ ಸಚಿವರ ಕುಟುಂಬ

ಸಚಿವ ಡಾ.ಸುಧಾಕರ್ ತಂದೆಗೆ ಕೊರೋನಾ ಪಾಸಿಟಿವ್ : ಆತಂಕದಲ್ಲಿ ಸಚಿವರ ಕುಟುಂಬ

spot_img
- Advertisement -
- Advertisement -

ಬೆಂಗಳೂರು : ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಂದೆಯವರು ಜ್ವರ, ಕೆಮ್ಮಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂತಹ ಅವರ 82 ವರ್ಷದ ತಂದೆಯ ಕೊರೋನಾ ಪರೀಕ್ಷೆಯ ವರದಿ ಬಂದಿದ್ದು, ಸಚಿವ ಸುಧಾಕರ್ ಅವರ ತಂದೆಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಕುಟುಂಬದ ಇತರೆ ಸದಸ್ಯರ ಕೊರೋನಾ ಲ್ಯಾಬ್ ವರದಿ ಬರಬೇಕಿದ್ದು. ಇದೀಗ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.

ಈ ಕುರಿತಂತೆ ಟ್ವಿಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ನನ್ನ ತಂದೆಯವರ ಕೋವಿಡ್ ಪರೀಕ್ಷಾ ವರದಿ ಯಲ್ಲಿ ಸೋಂಕು ದೃಢಪಟ್ಟಿದೆ. ಕುಟುಂಬದ ಇತರೆ ಸದಸ್ಯರ ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ಕೋರಿಕೊಂಡಿದ್ದಾರೆ.

ಅಂದಹಾಗೇ ಸಚಿವ ಡಾ.ಕೆ.ಸುಧಾಕರ್ ಅವರ ಮನೆಯ ಅಡುಗೆಯವನಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇವರಿಂದಲೇ ಅವರ ತಂದೆಗೂ ಕೊರೋನಾ ಸೋಂಕು ತಗುಲಿರಬಹುದು ಎಂಬುದಾಗಿ ಹೇಳಲಾಗುತ್ತಿದೆ.

- Advertisement -
spot_img

Latest News

error: Content is protected !!