Thursday, June 25, 2026
Homeತಾಜಾ ಸುದ್ದಿಹೊರ ಗುತ್ತಿಗೆ ಆಧಾರದ ಮಹಿಳಾ ನೌಕರರಿಗೂ ಮಾತೃತ್ವ ರಜೆ: ರಾಜ್ಯ ಸರ್ಕಾರದ ಇಲಾಖೆಗಳು, ನಿಗಮ, ಮಂಡಳಿ,...

ಹೊರ ಗುತ್ತಿಗೆ ಆಧಾರದ ಮಹಿಳಾ ನೌಕರರಿಗೂ ಮಾತೃತ್ವ ರಜೆ: ರಾಜ್ಯ ಸರ್ಕಾರದ ಇಲಾಖೆಗಳು, ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳ ನೌಕರರಿಗೆ ಸಿಗಲಿದೆ ರಜೆ

- Advertisement -
- Advertisement -

ಬೆಂಗಳೂರು: ರಾಜ್ಯ ಸರ್ಕಾರದ ಇಲಾಖೆಗಳಲ್ಲಿ, ನಿಗಮಗಳಲ್ಲಿ, ಮಂಡಳಿಗಳಲ್ಲಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೂ ಇನ್ನೂ ಹೆರಿಗೆ ರಜೆ ಸೌಲಭ್ಯ ದೊರೆಯಲಿದೆ.

ಮಾತೃತ್ವ ರಜೆ ಹೊರ ಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೂ ವಿಸ್ತರಿಸಿ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ರಜೆ ಪ್ರಾರಂಭದ ದಿನದಿಂದ ಗರಿಷ್ಠ ನೂರ ಎಂಬತ್ತು ದಿನಗಳವರೆಗೆ ವೇತನ ಸಹಿತ ರಜೆ ಪಡೆಯಲು ಮಹಿಳಾ ನೌಕರರು ಅರ್ಹರಾಗಿರುತ್ತಾರೆ.

ಏಪ್ರಿಲ್ ಒಂದರಿಂದಲೇ ಈ ಸೌಲಭ್ಯ ಜಾರಿಗೆ ಬರಲಿದೆ.

ಆದರೆ ಎರಡು ಅಥವಾ ಹೆಚ್ಚು ಮಕ್ಕಳನ್ನು ಹೊಂದಿರುವ ಗುತ್ತಿಗೆ ನೌಕರರಿಗೆ ರಜೆ ಸೌಲಭ್ಯ ದೊರೆಯುವುದಿಲ್ಲ.

- Advertisement -

Latest News

error: Content is protected !!