Monday, June 8, 2026
Homeಕರಾವಳಿಉಡುಪಿಉಡುಪಿ: ಮಾನಸಿಕ ಅಸ್ವಸ್ಥ ಪತಿಯಿಂದ ಮಾರಣಾಂತಿಕ ಹಲ್ಲೆ !

ಉಡುಪಿ: ಮಾನಸಿಕ ಅಸ್ವಸ್ಥ ಪತಿಯಿಂದ ಮಾರಣಾಂತಿಕ ಹಲ್ಲೆ !

- Advertisement -
- Advertisement -

ಉಡುಪಿ: ವ್ಯಕ್ತಿಯೋರ್ವ ಮಾನಸಿಕ ಅಸ್ವಸ್ಥನಾಗಿ ರಾಕ್ಷಸ ಪ್ರವೃತ್ತಿ ಮೆರೆದು ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದ. ಈತನನ್ನು ಮಹಿಳಾ ಪೋಲಿಸ್ ಠಾಣಾ ಪೊಲೀಸರ ಸಹಾಯದಿಂದ ವಿಶು ಶೆಟ್ಟಿ ಅಂಬಲಪಾಡಿಯವರು ವಶಕ್ಕೆ ಪಡೆದು ಉಡುಪಿಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ .

ನಾಗೇಶ್ (30) ಪತ್ನಿ ಹಾಗೂ 3 ವರ್ಷದ ಮಗನೊಂದಿಗೆ ಇದ್ದರು. ಇತ್ತೀಚೆಗೆ ಮಾನಸಿಕ ಅಸ್ವಸ್ಥನಾಗಿ , ಭಯಾನಕವಾಗಿ ವರ್ತಿಸುವುದರ ಜೊತೆಗೆ ಪತ್ನಿಗೆ ನಿರಂತರ ಹಲ್ಲೆ ನಡೆಸುತ್ತಿದ್ದು, ಹಲ್ಲೆಗೊಳಗಾದ ಪತ್ನಿಗೆ ಪೋಲಿಸರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿದ್ದಾರೆ.

ಪತಿ ಹಲ್ಲೆ ನಡೆಸದಂತೆ ಹಾಗೂ ಮಾನಸಿಕ ಕಾಯಿಲೆಗೆ ಚಿಕಿತ್ಸೆ ನೀಡುವಂತೆ ಪತ್ನಿ ಮಹಿಳಾ ಠಾಣಾ ಪೊಲೀಸರಿಗೆ ಮನವಿಯನ್ನು ನೀಡಿದ್ದಾರೆ. ಬಡ ಕೂಲಿ ಕಾರ್ಮಿಕೆಯಾದ ಮಹಿಳೆಯ ಅಸಹಾಯಕತೆಯನ್ನು ತಿಳಿದ ವಿಶು ಶೆಟ್ಟಿಯವರು ಚಿಕಿತ್ಸೆಗೆ ತಾನೇ ಜವಾಬ್ದಾರಿಯನ್ನು ಹೊತ್ತು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Latest News

error: Content is protected !!