Thursday, June 4, 2026
Homeಕರಾವಳಿಶರಣ್ ಪಂಪ್ ವೆಲ್ ಗೆ ಹೇರಿರುವ ನಿರ್ಬಂಧ ಮರು ಪರಿಶೀಲನೆಗೆ ಚಿತ್ರದುರ್ಗ ಡಿಸಿಗೆ ಮನವಿ

ಶರಣ್ ಪಂಪ್ ವೆಲ್ ಗೆ ಹೇರಿರುವ ನಿರ್ಬಂಧ ಮರು ಪರಿಶೀಲನೆಗೆ ಚಿತ್ರದುರ್ಗ ಡಿಸಿಗೆ ಮನವಿ

- Advertisement -
- Advertisement -

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಗೆ ವಿಧಿಸಿರುವ ನಿರ್ಬಂಧವನ್ನು ಮರು ಪರಿಶೀಲಿಸುವಂತೆ ಚಿತ್ರದುರ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರನ್ನು ಚಿತ್ರದುರ್ಗದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ನೇತೃತ್ವದ ಹಿಂದೂ ಮಹಾಗಣಪತಿ ಸಮಿತಿ ನಿರ್ಬಂಧ ಮರು ಪರಿಶೀಲಿಸುವಂತೆ ಮನವಿ ಮಾಡಿದೆ.

ಚಿತ್ರದುರ್ಗದಲ್ಲಿ ಇಂದು ಸಂಜೆ ಹಿಂದೂ ಮಹಾಗಣಪತಿ ಉತ್ಸವದಲ್ಲಿ ವಿಶ್ವ ಹಿಂದೂ‌ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಭಾಷಣ ನಿಗದಿಯಾಗಿತ್ತು.

ಆದರೆ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಚಿತ್ರದುರ್ಗ ಜಿಲ್ಲಾಡಳಿತ ಶರಣ್ ಪಂಪ್ ವೆಲ್ ಗೆ ಅಕ್ಟೋಬರ್ 7 ರವರೆಗೆ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಿದೆ.

- Advertisement -

Latest News

error: Content is protected !!