Tuesday, May 7, 2024
Homeತಾಜಾ ಸುದ್ದಿಕಳೆದ ಎರಡು ವರ್ಷಗಳಿಂದ  ನನ್ನ ಬಳಿ ಕೇಳುತ್ತಿರುವ ಪ್ರಶ್ನೆಗೆ ಇಂದು ಉತ್ತರ ನೀಡುತ್ತೇನೆ; ತೀವ್ರ ಕುತೂಹಲ...

ಕಳೆದ ಎರಡು ವರ್ಷಗಳಿಂದ  ನನ್ನ ಬಳಿ ಕೇಳುತ್ತಿರುವ ಪ್ರಶ್ನೆಗೆ ಇಂದು ಉತ್ತರ ನೀಡುತ್ತೇನೆ; ತೀವ್ರ ಕುತೂಹಲ ಮೂಡಿಸಿದೆ ಮೇಘನಾ ರಾಜ್ ಸೋಷಿಯಲ್ ಮೀಡಿಯಾ ಪೋಸ್ಟ್

spot_img
- Advertisement -
- Advertisement -

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ನನ್ನ ಬಳಿ ಕೇಳುತ್ತಿರುವ ಆ ಪ್ರಶ್ನೆಗೆ ನಾಳೆ (ಅಂದರೆ ಇವತ್ತು) ಉತ್ತರ ನೀಡುತ್ತೇನೆ ಎಂದು ನಟಿ ಮೇಘನಾರಾಜ್ ನಿನ್ನೆ ತಮ್ಮ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಮಾಹಿತಿ ನೀಡಿದ್ದಾರೆ.

“2020, ಭಾನುವಾರದ ದಿನ ನನ್ನ ಬದುಕು ಸಂಪೂರ್ಣವಾಗಿ ಬದಲಾಯ್ತು. ಆಗಿನಿಂದಲೂ ನನಗೆ ಒಂದು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಆ ಒಂದು ಪ್ರಶ್ನೆಗೆ ಉತ್ತರ ನೀಡುವ ಸಮಯ ಬಂದಿದೆ. ಭಾನುವಾರ ನಾನು ಆ ಪ್ರಶ್ನೆಯೊಂದಕ್ಕೆ ಉತ್ತರ ನೀಡಲಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ನಟಿ ಮೇಘನಾ ರಾಜ್ ಸರ್ಜಾ ಅವರು ಕುತೂಹಲ ಮೂಡಿಸಿದ್ದಾರೆ. ಈ ಮೂಲಕ ಜೀವನದ ಬಹುಮುಖ್ಯವಾದ ವಿಷಯವೊಂದನ್ನು ಬಹಿರಂಗಪಡಿಸಲಿದ್ದಾರೆ.

ಬಹುತೇಕ ಅಭಿಮಾನಿಗಳು ಹಾಗೂ ಸ್ನೇಹಿತರು ನೀವು ಮತ್ತೊಂದು ಮದುವೆ ಯಾಕೆ ಆಗಬಾರದು? ನೀವು ಎರಡನೇ ಮದುವೆಯಾಗುತ್ತೀರಾ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು. ಸದ್ಯ ಮೇಘನಾ ರಾಜ್ ಅವರು ನನಗೆ ಬಹಳ ಸಲ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಲಿದ್ದೇನೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದು ಅದು ಭಾರೀ ಕುತೂಹಲ ಮೂಡಿಸಿದೆ. ಇಂದು ಬೆಳಗ್ಗೆ 10.35ಕ್ಕೆ ಮೇಘನಾ ಅವರು ಯಾವ ಪ್ರಶ್ನೆಗೆ ಉತ್ತರ ನೀಡುತ್ತಾರೆ ಅಂತಾ ಕಾದು ನೋಡ್ಬೇಕು

- Advertisement -
spot_img

Latest News

error: Content is protected !!