- Advertisement -
- Advertisement -
ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಅವರು ಇಂದು ಮೊದಲ ಬಾರಿಗೆ ಬಳ್ಳಾರಿ ಜೈಲಿನಲ್ಲಿ ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯ, ಬಾವ ಮಂಜುನಾಥ್, ಅಕ್ಕನ ಮಕ್ಕಳಾದ ರವಿಚಂದ್ರ, ಇಂದ್ರಕುಮಾರ್ ಅವರು ಭೇಟಿಯಾಗಿದ್ದಾರೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಬಳ್ಳಾರಿ ಜೈಲಿಗೆ ದರ್ಶನ್ ಕುಟುಂಬ ಆಗಮಿಸಿದೆ. ಇನ್ನು ಮಗನನ್ನು ನೋಡಿ ಮೀನಾ ತೂಗುದೀಪ ಅವರು ಭಾವುಕರಾಗಿದ್ದಾರೆ. ಮನೆಯಿಂದ ತಂದ ಬೇಕರಿ ತಿನಿಸು ಮತ್ತು ಡ್ರೈಫ್ರೂಟ್ ಅನ್ನು ಅಕ್ಕ ದಿವ್ಯ ದರ್ಶನ್ ಗೆ ಕೊಟ್ಟಿದ್ದಾರೆ.
ಇನ್ನು ತಾಯಿ ಬಂದ ವಿಚಾರ ಗೊತ್ತಾಗುತ್ತಿದ್ದಂತೆ ನಗುತ್ತಲೇ ತಮ್ಮ ಸೆಲ್ ನಿಂದ ಹೊರ ಬಂದ ಡಿ ಬಾಸ್ ಕೆಲ ಹೊತ್ತು ಅವರೊಂದಿಗೆ ಕಳೆದಿದ್ದಾರೆ.
- Advertisement -