Wednesday, June 3, 2026
Homeಕರಾವಳಿಉಡುಪಿಕಾರ್ಕಳ: ಬಾವಿಗೆ ಹಾರಿ ಎಂಬಿಎ ವಿದ್ಯಾರ್ಥಿ ಆತ್ಮಹತ್ಯೆ

ಕಾರ್ಕಳ: ಬಾವಿಗೆ ಹಾರಿ ಎಂಬಿಎ ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾರ್ಕಳದ ಕಸಬಾ ಗ್ರಾಮದಲ್ಲಿ ನಡೆದಿದೆ.ಕಸಬಾ ಗ್ರಾಮದ ಮೀನಗುಂಡಿ ಕಂಪೌಂಡ್‌ನ ಕೆ. ವೆಂಕಟೇಶ ಹೆಗ್ಡೆ (22) ಮೃತ ವಿದ್ಯಾರ್ಥಿ. 

ಈತ ಮಂಗಳೂರು ಸೈಂಟ್‌ ಜೋಸೆಫ್‌ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದ. ವಿದ್ಯಾಭ್ಯಾಸ ಮಾಡಲು ಕಷ್ಟವಾಗುತ್ತಿದೆ ಎಂದು ತಂದೆಯ ಬಳಿ ಹೇಳಿಕೊಂಡಿದ್ದನು ಎನ್ನಲಾಗಿದೆ. ಸುಮಾರು 10 ದಿನಗಳಿಂದ ಮೌನವಾಗಿದ್ದು, ಇದೇ ಕಾರಣದಿಂದ ಮನನೊಂದು ನಿನ್ನೆ ತಡರಾತ್ರಿ ಮನೆಯ ಹಿಂಬದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!