Wednesday, June 3, 2026
Homeಅಪರಾಧದೆವ್ವ ಹಿಡಿದಿದೆ ಎಂದು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮೌಲ್ವಿ; ಕುರಾನ್ ಪಠಿಸಲು ಮಸೀದಿಗೆ ಬರುತ್ತಿದ್ದ...

ದೆವ್ವ ಹಿಡಿದಿದೆ ಎಂದು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮೌಲ್ವಿ; ಕುರಾನ್ ಪಠಿಸಲು ಮಸೀದಿಗೆ ಬರುತ್ತಿದ್ದ ಬಾಲಕಿ

- Advertisement -
- Advertisement -

ಚಿತ್ರದುರ್ಗ: ಬಾಲಕಿಯೋರ್ವಳು ಕುರಾನ್ ಪಠಿಸಲು ಮಸೀದಿಗೆ ಬರುತ್ತಿದ್ದ ಸಂದರ್ಭದಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮೌಲ್ವಿ ಸೇರಿ ಇಬ್ಬರನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೌಲ್ವಿ ಅಬ್ದುಲ್ ರೆಹಮಾನ್, ಬಾಲಕಿಯ ಅಣ್ಣ ಬಂಧಿತರು. ಬಾಲಕಿ ಮೂರು ವರ್ಷಗಳಿಂದ ಕುರಾನ್ ಪಠಿಸಲು ಮಸೀದಿಗೆ ಬರುತ್ತಿದ್ದಳು.

ಬಾಲಕಿಗೆ ದೆವ್ವ ಹಿಡಿದಿದೆ, ಗಾಳಿ ಸೋಕಿದೆ ಎಂದು ಕುಟುಂಬದ ಸದಸ್ಯರಿಗೆ ಮೌಲ್ವಿ ನಂಬಿಸಿದ್ದಾನೆ. ದೈಹಿಕ ಸುಖ ನೀಡಿದರೆ ದೆವ್ವ ಬಿಡುತ್ತದೆ ಎಂದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!