Thursday, June 4, 2026
Homeಕರಾವಳಿಪತಿ ಮೇಲೆ ಕೋಪಗೊಂಡು ಮನೆ ಬಿಟ್ಟು ಹೋದ ಪತ್ನಿ ನಾಪತ್ತೆ; ದೂರು ದಾಖಲು

ಪತಿ ಮೇಲೆ ಕೋಪಗೊಂಡು ಮನೆ ಬಿಟ್ಟು ಹೋದ ಪತ್ನಿ ನಾಪತ್ತೆ; ದೂರು ದಾಖಲು

- Advertisement -
- Advertisement -

ಮಂಗಳೂರು: ವಿವಾಹಿತೆ ಕಾಣೆಯಾಗಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.


.ನಗರದ ಮಠದ ಕಣಿ ಕ್ರಾಸ್ ರಸ್ತೆಯ ಗಾಂಧಿನಗರದ ಮನೆಯೊಂದರಲ್ಲಿ ವಾಸವಾಗಿದ್ದ ಶಶಿಧರ ಎಂಬವರ ಪತ್ನಿ ಗೀತಾ (36) ಎಂಬಾಕೆ ಮೇ 7ರಿಂದ ನಾಪತ್ತೆಯಾದ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.


ಶಶಿಧರ ಕೂಲಿ ಕೆಲಸ ಮಾಡಲೆಂದು ನಾಲ್ಕು ತಿಂಗಳ ಹಿಂದೆ ಮಂಗಳೂರಿಗೆ ಬಂದಿದ್ದು, ಇತ್ತೀಚೆಗೆ ಹಣದ ವಿಚಾರಕ್ಕೆ ಸಂಬಂಧಿಸಿ ಪತಿ ಮತ್ತು ಪತ್ನಿಯ ಮಧ್ಯೆಮನಸ್ತಾಪ ಉಂಟಾಗಿತ್ತು.ಆ ಸಿಟ್ಟಿನಿಂದ ಗೀತಾ ಮನೆಬಿಟ್ಟು ಹೋಗಿದ್ದು, ಈವರೆಗೆ ಮರಳಿ ಬಾರದ ಕಾರಣ ದೂರು ನೀಡಲಾಗಿದೆ.

- Advertisement -

Latest News

error: Content is protected !!