- Advertisement -
- Advertisement -
ಮಂಗಳೂರು; ನಾಗರಹಾವಿಗೆ ಕರಾವಳಿಯಲ್ಲಿ ವಿಶೇಷ ಸ್ಥಾಮನಾನವಿದೆ. ನಾಗನನ್ನು ಇಲ್ಲಿ ವಿಶೇಷವಾಗಿ ಆರಾಧಿಸಲಾಗುತ್ತದೆ. ಇಂತಹ ನಾಗನಿಗೆ ತೊಂದರೆ ಕೊಟ್ಟವನೊಬ್ಬ ಇದೀಗ ಆಸ್ಪತ್ರೆಯಲ್ಲಿ ನರಳುತ್ತಿದ್ದಾನೆ. ಡೀಸೆಲ್ ಎರಚಿದಾತನಿಗಾದ ಪರಿಸ್ಥಿತಿ ಹೇಗಿದೆ ನೋಡಿ..
ಕಳೆದ ಒಂದು ವಾರದ ಹಿಂದೆ ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ನಾಗರ ಹಾವೊಂದು ಕಂಡು ಬಂದಿತ್ತು. ಆಗ ಉತ್ತರ ಕರ್ನಾಟಕದ ಕಾರ್ಮಿಕ ನೋರ್ವ ಅದಕ್ಕೆ ಡೀಸೆಲ್ ಎರಚಿದ್ದಾನೆ. ಕೂಡಲೇ ಹಾವು ಮೈ ಉರಿಯಿಂದ ಒದ್ದಾಡತೊಡಗಿತ್ತು, ಸ್ಥಳೀಯರು ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ವಿಷಯ ತಿಳಿಸಿ ಹಾವಿಗೆ ಚಿಕಿತ್ಸೆ ನೀಡಿ, ಸಹಜ ಸ್ಥಿತಿಗೆ ಮರಳುವಂತೆ ಮಾಡಿದರು .
ಆದರೆ ಇದೀಗ ಡಿಸೇಲ್ ಎರಚಿದ ಕಾರ್ಮಿಕ ಮೈ ಉರಿಯ ಸಮಸ್ಯೆಯಿಂದ ಬಲಳುತಿದ್ದು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ನಾಗರ ಹಾವಿಗೆ ಡಿಸೇಲ್ ಎರಚಿದ ಕಾರಣ ಈ ಸಮಸ್ಯೆ ಪ್ರಾರಂಭವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
- Advertisement -