Thursday, June 4, 2026
Homeತಾಜಾ ಸುದ್ದಿನೆರೆಮನೆಯವರ ಕೋಳಿ ಕೂಗೋದರಿಂದ ನಿದ್ದೆ ಬರುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ಭೂಪ

ನೆರೆಮನೆಯವರ ಕೋಳಿ ಕೂಗೋದರಿಂದ ನಿದ್ದೆ ಬರುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ಭೂಪ

- Advertisement -
- Advertisement -

ಬೆಂಗಳೂರು: ಪಕ್ಕದ ಮನೆಯವರ ಕೋಳಿ ಕೂಗೋದರಿಂದ ನಮಗೆ ನಿದ್ದೆ ಬರುತ್ತಿಲ್ಲ ಎಂದು ಭೂಪನೊಬ್ಬ ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಪೊಲೀಸರಿಗೆ ಟ್ವೀಟ್ ಮೂಲಕ ಟ್ಯಾಗ್ ಮಾಡಿರುವ ನೆವೋ ಎಂಬ ವ್ಯಕ್ತಿ ಎದುರು ಮನೆಯವರು ಕೋಳಿ ಮತ್ತು ಬಾತುಕೋಳಿ ಸಾಕುತ್ತಿದ್ದಾರೆ. ಅವುಗಳು ಪ್ರತಿದಿನ ಕೂಗುವುದರಿಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿದೆ. ನಮ್ಮ ಮನೆಯಲ್ಲಿರುವ ಎರಡು ತಿಂಗಳ ಮಗು ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟ್ವಿಟ್ಟರ್ ಮೂಲಕ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.

ನಿಮೊ ಎಂಬ ಟ್ವಿಟ್ಟರ್ ಖಾತೆ ಮೂಲಕ ಹುಂಜಾ ಕೂಗುವ ವಿಡಿಯೋ ಹಂಚಿಕೊಂಡು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡ ಲಾಗಿದೆ. ನಗರದ ಜೆ.ಪಿ.ನಗರ 8ನೇ ಹಂತದಲ್ಲಿರುವ ವ್ಯಕ್ತಿಯಿಂದ ದೂರು ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಿ ಅಥವಾ ಹುಂಜಾ ಮತ್ತು ಕೋಳಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪೊಲೀಸರು ಪ್ರತಿಕ್ರಿಯಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.         

- Advertisement -

Latest News

error: Content is protected !!