Saturday, June 6, 2026
Homeಕರಾವಳಿಕಾಸರಗೋಡು: ಪೊಲೀಸರನ್ನು ಕಂಡು ಹೆದರಿ ಓಡಿದ ಯುವಕ ಬಾವಿಗೆ ಬಿದ್ದು ಸಾವು

ಕಾಸರಗೋಡು: ಪೊಲೀಸರನ್ನು ಕಂಡು ಹೆದರಿ ಓಡಿದ ಯುವಕ ಬಾವಿಗೆ ಬಿದ್ದು ಸಾವು

- Advertisement -
- Advertisement -

ಕಾಸರಗೋಡು: ಮಂಜೇಶ್ವರ ಸಮೀಪ ಮಜೀರ್ಪಳ್ಳ ಎಂಬಲ್ಲಿ ಪೊಲೀಸರನ್ನು ಕಂಡು ಹೆದರಿ ಓಡಿ ಯುವಕ ಪಾಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕೋಳ್ಯೂರಿನ ಸಂಪತ್(26) ಎಂದು ಗುರುತಿಸಲಾಗಿದೆ.

ಸ್ನೇಹಿತರ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರ ವಾಹನವನ್ನು ಗಮನಿಸಿದ ಈತ ಅಲ್ಲಿಂದ ಪರಾರಿಯಾಗಿದ್ದು, ಸ್ವಲ್ಪ ಸಮಯ ಕಳೆದು ಜೊತೆಗಿದ್ದ ಸ್ನೇಹಿತರು ಹುಡುಕಾಡಿದಾಗ ಸಂಪತ್ ನಾಪತ್ತೆಯಾಗಿದ್ದನು. ನಾಪತ್ತೆಯಾದ ಕುರಿತು ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳೀಯರು ಶೋಧ ನಡೆಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

- Advertisement -

Latest News

error: Content is protected !!