Thursday, June 4, 2026
Homeಕರಾವಳಿಕುವೈ‌ತ್ ನಲ್ಲಿ ರಸ್ತೆ ಅಪಘಾತಕ್ಕೆ ಮಂಗಳೂರಿನ ಯುವಕ ಬಲಿ

ಕುವೈ‌ತ್ ನಲ್ಲಿ ರಸ್ತೆ ಅಪಘಾತಕ್ಕೆ ಮಂಗಳೂರಿನ ಯುವಕ ಬಲಿ

- Advertisement -
- Advertisement -

ಮಂಗಳೂರು: ನಗರದ ಪಡೀಲ್ ಸಮೀಪದ ಬಜಾಲ್ ಪಕಲಡ್ಕದ ನಿವಾಸಿ ಸೀಫ್ ಪಕ್ಕಲಡ್ಕ (33) ಎಂಬ ಯುವಕ ಕುವೈತ್ ನಲ್ಲಿ ರಸ್ತೆ ಅಪಘಾತಕ್ಕೆ ನಿನ್ನೆ ಬಲಿಯಾಗಿದ್ದಾರೆ.

ಕುವೈತ್ ನ ಕಂಪೆನಿಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿದ್ದ ಆಸೀಫ್ ಪಕ್ಕಲಡ್ಕ ಶುಕ್ರವಾರ ಸಂಜೆ ಕೆಲಸ ಮುಗಿಸಿ ತನ್ನ ರೂಮಿಗೆ ಬೈಕ್‌ನಲ್ಲಿ ಮರಳುತ್ತಿದ್ದಾಗ ಕಾರೊಂದು ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಆಸೀಫ್ ಪಕ್ಕಲಡ್ಕ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತರು ಪತ್ನಿ, ತಾಯಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!