Wednesday, June 24, 2026
Homeಕರಾವಳಿಮಂಗಳೂರುಮಂಗಳೂರು:2024 ರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹರಿಬಿಟ್ಟ ಆರೋಪಿ ಅರೆಸ್ಟ್

ಮಂಗಳೂರು:2024 ರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹರಿಬಿಟ್ಟ ಆರೋಪಿ ಅರೆಸ್ಟ್

- Advertisement -
- Advertisement -

ಮಂಗಳೂರು: 2024 ರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹರಿಬಿಟ್ಟ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರುಅರೆಸ್ಟ್ ಮಾಡಿದ್ದಾರೆ. ಫೆಲಿಕ್ಸ್ಎಡ್ವರ್ಡ್ಮಥಾಯಿಸ್(56) ಬಂಧಿತ ಆರೋಪಿ.

ಆರೋಪಿ ಫೆಲಿಕ್ಸ್ಎಡ್ವರ್ಡ್ಮಥಾಯಿಸ  2024 ನೇ ಸಾಲಿನ ಫೆಬ್ರವರಿ ತಿಂಗಳಿನಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿಬಿಟ್ಟಿದ್ದ.  ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಅ.ಕ್ರನಂಬ್ರ-29/2024 ಕಲಂ153(ಎ), 504, 507, 509 ಐಪಿಸಿ& ಕಲಂ66(ಡಿ) ಐ.ಟಿಕಾಯ್ದೆಪ್ರಕಾರ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಯು ಆ ಸಮಯದಲ್ಲಿ ಸೌದಿ ಅರೇಬಿಯಾದಲ್ಲಿದ್ದಿದ್ದು, ದಸ್ತಗಿರಿಗೆ ಸಿಕ್ಕಿರಲಿಲ್ಲ. ಆರೋಪಿಫೆಲಿಕ್ಸ್ಎಡ್ವರ್ಡ್ಮಥಾಯಿಸ್(ಪ್ರಾಯ56 ವರ್ಷ)  ಮೂಲತಮುಂಬಯಿಯಚಾರ್ಕೋಪ್ಎಂಬಲ್ಲಿಯವನಾಗಿದ್ದು, ಈತನುಹೊರದೇಶದಸೌದಿಅರೇಬಿಯದಲ್ಲಿ ಉದ್ಯೋಗದಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿತನ ವಿರುದ್ದಲುಕ್ಔಟ್ನೋಟಿಸ್ ಹೊರಡಿಸಲಾಗಿತ್ತು.

ಆರೋಪಿಯು ಮುಂಬಯಿಯ ಸಹರಾ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬಂದು ಇಳಿದವನನ್ನು ಇಮಿಗ್ರೇಶನ್ ಅಧಿಕಾರಿಗಳು ತಡೆಹಿಡಿದು ಮಾಹಿತಿ ನೀಡಿದ್ದು, ಅದರಂತೆ ಆತನನ್ನು  ದಿನಾಂಕ 05-12-2025 ರಂದು ಮುಂಬಯಿಯ ಸಹರಾ ಏರ್ ಪೋರ್ಟ್ ನಲ್ಲಿ ಬಂಧಿಸಿ ತನಿಖೆಗೆ ಒಳಪಡಿಸಿ, ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ಈ ಆರೋಪಿಯ ಪಾಸ್ ಪೋರ್ಟ್ ನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿತ ಎವಿಜಿನ್ ಜಾನ್ ಡಿಸೋಜಾ (ಪ್ರಾಯ 57 ವರ್ಷ) ಎಂಬವನನ್ನು ದಿನಾಂಕ 11-08-2024 ರಂದು ದಸ್ತಗಿರಿ ಮಾಡಿ,  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು, ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ.

- Advertisement -

Latest News

error: Content is protected !!