Saturday, June 6, 2026
Homeಕರಾವಳಿತುಳು ಸಿನಿಮಾದ ಹಾಡೊಂದಕ್ಕೆ ಧ್ವನಿಯಾದ ಖ್ಯಾತ ಗಾಯಕಿ ಮಂಗ್ಲಿ

ತುಳು ಸಿನಿಮಾದ ಹಾಡೊಂದಕ್ಕೆ ಧ್ವನಿಯಾದ ಖ್ಯಾತ ಗಾಯಕಿ ಮಂಗ್ಲಿ

- Advertisement -
- Advertisement -

ಮಂಗಳೂರು: ತುಳು ಸಿನಿಮಾದ ಹಾಡೊಂದಕ್ಕೆ ಖ್ಯಾತ ಗಾಯಕಿ ಮಂಗ್ಲಿ ಧ್ವನಿಯಾಗಿದ್ದಾರೆ.  ಎ.ಆರ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಅರುಣ್ ರೈ ತೋಡಾರ್ ನಿರ್ಮಾಣ, ಎಸ್.ವಿ.ಬಾಬು ರಾಜೇಂದ್ರ ಸಿಂಗ್ ನಿರ್ದೇಶನದ ‘ಬಿರ್ದ್‌ದ ಕಂಬಳ’ ಮತ್ತು ‘ಕನ್ನಡದ ವೀರ ಕಂಬಳ’ ಸಿನಿಮಾಕ್ಕೆ ಹಾಡಿದ್ದಾರೆ. ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲೂ ಹಾಡು ಹಾಡಿರುವುದು ವಿಶೇಷ. ತುಳುವಿನ ಕೆ.ಕೆ.ಪೇಜಾವರ, ಕನ್ನಡದ ರಘು ಶಾಸ್ತ್ರಿ ಅವರ ಸಾಹಿತ್ಯಕ್ಕೆ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ.

ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ ಕಂಬಳದ ಕುರಿತು ತುಳು ಮತ್ತು ಕನ್ನಡದಲ್ಲಿ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರ ಸಂಪೂರ್ಣ ಕರಾವಳಿಯ ಜಾನಪದ ಕಲೆ ಕಂಬಳದ ಕುರಿತಾಗಿದ್ದು, ಚಿತ್ರೀಕರಣದ ವೇಳೆ ಸುಮಾರು 20 ಜೊತೆ ಕೋಣ ಹಾಗೂ 500ಕ್ಕೂ ಹೆಚ್ಚಿನ ಕಲಾವಿದರೊಂದಿಗೆ ಚಿತ್ರೀಕರಣ ನಡೆದಿದೆ.

- Advertisement -

Latest News

error: Content is protected !!