Wednesday, October 14, 2026
Homeಕರಾವಳಿಮಂಗಳೂರು:ಕಾರಿಗೆ ಪೆಟ್ರೋಲ್ ಹಾಕಿಸಿ ಹಣ ಕೊಡದೇ ಕಾರು ಚಾಲಕ ಪರಾರಿ

ಮಂಗಳೂರು:ಕಾರಿಗೆ ಪೆಟ್ರೋಲ್ ಹಾಕಿಸಿ ಹಣ ಕೊಡದೇ ಕಾರು ಚಾಲಕ ಪರಾರಿ

- Advertisement -
- Advertisement -

ಮಂಗಳೂರು:ಕಾರಿಗೆ ಪೆಟ್ರೋಲ್ ಹಾಕಿಸಿ ಹಣ ಕೊಡದೇ ಕಾರು ಚಾಲಕ ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 20ರಂದು ರಾತ್ರಿ 11.19ಕ್ಕೆ ಕಾವೂರಿನ ಪೆಟ್ರೋಲ್ ಪಂಪ್‌ನಲ್ಲಿ ನೀಲಿ ಬಣ್ಣದ ಕಾರಿಗೆ ಫುಲ್‌ಟ್ಯಾಂಕ್ ಪೆಟ್ರೋಲ್ ತುಂಬಿಸಿದ ಅಪರಿಚಿತ 4,100.60 ರೂ. ಬಿಲ್ ಪಾವತಿಸದೆ ವೇಗವಾಗಿ ಕಾವೂರು ಜಂಕ್ಷನ್ ಕಡೆಗೆ ಪರಾರಿಯಾಗಿದ್ದಾನೆ ಎಂದು ದೂರು ದಾಖಲಾಗಿದೆ.

ಪೆಟ್ರೋಲ್ ಪಂಪ್ ಸಿಬ್ಬಂದಿ ಕಾರನ್ನು ಬೆನ್ನಟ್ಟಿ ನೋಡಿದಾಗ ಕಾರಿನ ಎದುರು ಮತ್ತು ಹಿಂಬದಿ ನೋಂದಣಿ ಸಂಖ್ಯೆ ಇರಲಿಲ್ಲ ಎನ್ನಲಾಗಿದೆ.ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!