Sunday, July 6, 2025
Homeಕರಾವಳಿಮಂಗಳೂರುಮಂಗಳೂರು: ವಿವಾಹದ ಹಿಂದಿನ ದಿನ ವಧು ನಾಪತ್ತೆ

ಮಂಗಳೂರು: ವಿವಾಹದ ಹಿಂದಿನ ದಿನ ವಧು ನಾಪತ್ತೆ

spot_img
- Advertisement -
- Advertisement -

ಮಂಗಳೂರು: ವಿವಾಹದ ಹಿಂದಿನ ದಿನ ವಧು ನಾಪತ್ತೆಯಾಗಿರುವ ಘಟನೆ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೋಳಾರದ ನಾರಾಯಣ ಎಂಬವರ ಪುತ್ರಿ ಪಲ್ಲವಿ(22) ಕಾಣೆಯಾದ ವಧು .

ಈಕೆಯ ಒಪ್ಪಿಗೆಯಂತೆ ನಿಶ್ಚಿತಾರ್ಥವಾಗಿತ್ತು. ಅಲ್ಲದೆ ಏ.16ರಂದು ವಿವಾಹ ನಿಗದಿಯಾಗಿತ್ತು. ಆದರೆ ಎ.15ರಂದು ಮಧ್ಯಾಹ್ನ  ಮೆಹಂದಿ ಹಾಕಿಸಿಕೊಳ್ಳಲು ಬ್ಯೂಟಿಪಾರ್ಲರ್‌ಗೆ ಹೋಗಿ ಬರುವುದಾಗಿ ತಾಯಿಯಲ್ಲಿ ತಿಳಿಸಿ ಬಳಿಕ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಪಲ್ಲವಿಯ ಮೊಬೈಲ್ ಸ್ವಿಚ್‌ಆಫ್ ಆಗಿದೆ ಎಂದು ದೂರಿನಲ್ಲಿ ವಧು‌ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ.

5 ಅಡಿ ಎತ್ತರದ, ಬಿಳಿ ಮೈಬಣ್ಣದ, ಸಾಧಾರಣ ಶರೀರದ ಈಕೆ ಕನ್ನಡ, ತುಳು, ಇಂಗ್ಲಿಷ್, ಹಿಂದಿ ಮಾತನಾಡುತ್ತಾಳೆ. ಕಾಣೆಯಾದ ದಿನ ಬ್ಲೂ ಜೀನ್ಸ್ ಪ್ಯಾಂಟ್ ಮತ್ತು ಬ್ಲ್ಯಾಕ್ ಟೀ ಶರ್ಟ್ ಧರಿಸಿದ್ದಾಳೆ.

ಈಕೆಯ ಸುಳಿವು ಸಿಕ್ಕವರು ಪಾಂಡೇಶ್ವರ ಠಾಣೆ (0824- 2220518) ಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!