ಮಂಗಳೂರು; ಸೋಷಿಯಲ್ ಮೀಡಿಯಾದಲ್ಲಿ ಕೋಮು ಪ್ರಚೋದನಾಕಾರಿ ವೀಡಿಯೋ ಶೇರ್ ಮಾಡಿದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ , ಬಡಗಬೆಳ್ಳೂರು ಗ್ರಾಮದ ಕುಜೆಲ್ ಹೌಸ್ ನಿವಾಸಿ ಮಹಮ್ಮದ್ ರಫೀಕ್ (38) ಬಂಧಿತ.
ಆರೋಪಿ 2025 ನೇ ಸಾಲಿನ ಅಕ್ಟೋಬರ್ ನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ “ನಝೀರ ಮಂಗಳೂರು” ಎಂಬ ಫೇಸ್ ಬುಕ್ ಖಾತೆಯಿಂದ AI ತಂತ್ರಾಶದಲ್ಲಿ ತಿರುಚಿದ ವಿಡಿಯೋವನ್ನು ಶೇರ್ ಮಾಡಿ ಸಮಾಜದಲ್ಲಿ ಕೋಮುದ್ವೇಷವನ್ನು ಹುಟ್ಟುಹಾಕಲು ಪ್ರಚೋದಿಸರುವ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ; 196, 353(1), 351(2) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.
“ನಝೀರ ಮಂಗಳೂರು” ಎಂಬ ಫೇಸ್ ಬುಕ್ ಖಾತೆಯ ಬಗ್ಗೆ ವಿವರಗಳನ್ನು ಪಡೆಯಲಾಗಿದ್ದು, ಮಹಮ್ಮದ್ ರಫೀಕ್ “ನಝೀರ ಮಂಗಳೂರು” ಖಾತೆಯಿಂದ ವಿಡಿಯೋ ಶೇರ್ ಮಾಡಿದ್ದು ದೃಢಪಟ್ಟಿತ್ತು. ಆರೋಪಿಯನ್ನು ದಿನಾಂಕ: 22-03-2026 ರಂದು ಬೆಂಗಳೂರುನಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆರವರು ಆರೋಪಿಯನ್ನು ದಸ್ತಗಿರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ. .


