Thursday, June 25, 2026
Homeಕರಾವಳಿಮಂಗಳೂರುಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರದ ರಾಜೇಂದ್ರ.ಸಿ ( 48) ಬಂಧಿತ ಆರೋಪಿ.

2026ನೇ ಜನವರಿ ತಿಂಗಳಿನಲ್ಲಿ ಮಂಗಳೂರು ನಗರದ ಇಂಡಿಯಾನಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಕಿರಾತ್ (ಕುರಾನ್ ಸ್ಫಟಿಸುವ) ಸ್ಪರ್ಧೆಯ ವಿಡಿಯೋ ಸಾಮಾಜಿಕ ಜಾಲತಾಣವಾದ ಉದಯವಾಣಿ ಫೇಸ್ ಬುಕ್ ಪುಟದಲ್ಲಿ ಪ್ರಸಾರವಾಗುತ್ತಿದ್ದಾಗ ಬಾಲು ರಾಜೇಂದ್ರ  ಎಂಬ ಫೇಸ್ಬುಕ್ ಅಕೌಂಟ್ ನಲ್ಲಿ ಕೋಮು ಪ್ರಚೋದನಕಾರಿಯಾಗಿ ಕಮೆಂಟ್ ಹಾಕಲಾಗಿತ್ತು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣಾ ಅ.ಕ್ರ. 15/2026ಕಲಂ 196ಬಿ.ಎನ್.ಎಸ್ ಮತ್ತು 66ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

ತನಿಖೆಯ ಸಮಯದಲ್ಲಿ ಬಾಲು ರಾಜೇಂದ್ರ ಎಂಬ ಫೇಸ್ ಬುಕ್ ಖಾತೆಯಿಂದ ಕೋಮು ಪ್ರಚೋದಕ ಕಮೆಂಟ್ ಗಳನ್ನು ಹಾಕಿದ ವ್ಯಕ್ತಿಯು ಚಾಮರಾಜನಗರದ ರಾಜೇಂದ್ರ.ಸಿ ಅನ್ನೋದು ಗೊತ್ತಾಗಿದ್ದು ದಿನಾಂಕ 28-03-2026ರಂದು ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Latest News

error: Content is protected !!