Tuesday, April 23, 2024
Homeಕರಾವಳಿಮಂಗಳೂರು: ಅಪಾರ್ಟ್​ಮೆಂಟ್​ನ 14ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ

ಮಂಗಳೂರು: ಅಪಾರ್ಟ್​ಮೆಂಟ್​ನ 14ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ

spot_img
- Advertisement -
- Advertisement -

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕುಲಶೇಖರ ಚೌಕಿಯಲ್ಲಿರುವ ಬಹುಮಹಡಿಗಳ ಅಪಾರ್ಟ್‌ಮೆಂಟ್‌ ನ 14ನೇಮಹಡಿಯಿಂದ ಮಹಿಳೆಯೊಬ್ಬರು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಲಶೇಖರ ಚೌಕಿ ಎಂಬಲ್ಲಿನ ನಿವಾಸಿ ಪುಷ್ಪಲತಾ (64) ಮೃತರು.

ಮುಂಬೈ ವಿಮಾನ ನಿಲ್ದಾಣದ ನಿವೃತ್ತ ಮ್ಯಾನೇಜರ್ ಆಗಿದ್ದ ಪುಷ್ಪಲತಾ, ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಕುಲಶೇಖರ ಚೌಕಿ ಪ್ಲಾಮ ಗ್ರಾಂಡ್ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದರು. 14ನೇ ಮಹಡಿಯಲ್ಲಿರುವ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಿನ್ನತೆಯಿಂದ ಬಳಲುತ್ತಿದ್ದ ಪುಷ್ಪಲತಾ, ಈ ಹಿಂದೆಯೋ ಒಮ್ಮೆ ಅತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ಅವರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು, ಮೊದಲೊಮ್ಮೆ ಆತ್ಮಹತ್ಯೆಗೆ ಯತ್ನ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!