Wednesday, June 3, 2026
Homeಕರಾವಳಿಮಂಗಳೂರು: ನಗರ ಪಾಲಿಕೆಯ ನೂತನ ಮೇಯರಾಗಿ ಪ್ರೇಮಾನಂದ ಶೆಟ್ಟಿ ಆಯ್ಕೆ

ಮಂಗಳೂರು: ನಗರ ಪಾಲಿಕೆಯ ನೂತನ ಮೇಯರಾಗಿ ಪ್ರೇಮಾನಂದ ಶೆಟ್ಟಿ ಆಯ್ಕೆ

- Advertisement -
- Advertisement -

ಮಂಗಳೂರು: ಮಹಾನಗರಪಾಲಿಕೆಯ 22ನೆ ಅವಧಿಯ ನೂತನ ಮೇಯರ್ ಆಗಿ ಮಂಗಳಾದೇವಿ ವಾರ್ಡ್ ನ ಪ್ರೇಮಾನಂದ ಶೆಟ್ಟಿ ಹಾಗೂ ಉಪಮೇಯರ್ ಆಗಿ ಕುಂಜತ್ತ್‌ಬೈಲ್‌ ದಕ್ಷಿಣ ವಾರ್ಡ್ ನ ಸುಮಂಗಲಾ ರಾವ್ ಆಯ್ಕೆಯಾಗಿದ್ದಾರೆ.

5 ನೇ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವ ಮಂಗಳಾದೇವಿ ವಾರ್ಡ್‌ ನಿಂದ ಆಯ್ಕೆಯಾಗಿರುವ ಪ್ರೇಮಾನಂದ ಶೆಟ್ಟಿ, ಹಿರಿತನವನ್ನು ಪರಿಗಣಿಸಿ ಪಕ್ಷವು ಆಯ್ಕೆ ಮಾಡಿದೆ. ಮೇಯರ್ ಸ್ಥಾನಕ್ಕೆ ಬಿಜೆಪಿಯ ಪ್ರೇಮಾನಂದ ಶೆಟ್ಟಿ ಹಾಗೂ ಕಾಂಗ್ರೆಸ್ ನ ಅನಿಲ್ ಕುಮಾರ್ ನಾಮ ಪತ್ರ ಸಲ್ಲಿಸಿದ್ದು, ಕೈ ಎತ್ತುವ ಮೂಲಕ ಅಭ್ಯರ್ಥಿಗಳ ಪರ ಮತ ಚಲಾವಣೆ ಪ್ರಕ್ರಿಯೆ ನಡೆಯಿತು.

ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಬಿಜೆಪಿ 44, ಕಾಂಗ್ರೆಸ್‌ 14 ಹಾಗೂ ಎಸ್‌ಡಿಪಿಐ 2 ಸದಸ್ಯರು ಇದ್ದಾರೆ. 60 ಮಂದಿ ಸದಸ್ಯರು, ಸಂಸದರು, ಸ್ಥಳೀಯ ಶಾಸಕರು ಸೇರಿದಂತೆ ಒಟ್ಟು 64 ಮಂದಿ ಮತದಾರರಲ್ಲಿ 62 ಮಂದಿ ಉಪಸ್ಥಿತರಿದ್ದರು. ಅವರಲ್ಲಿ 46 ಮಂದಿ ಪ್ರೇಮಾನಂದ ಶೆಟ್ಟಿ ಪರವಾಗಿ ಮತ ಚಲಾಯಿಸಿದರು. ಅನಿಲ್ ಕುಮಾರ್ ಪರವಾಗಿ 14 ಮತಗಳು ಚಲಾವಣೆಯಾದವು. ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು.

ಉಪ ಮೇಯರ್ ಸ್ಥಾನಕ್ಕೆ ಸುಮಂಗಳಾ ಹಾಗೂ ಜೆಸಿಂತಾ ವಿಜಯ ಆಲ್ಫ್ರೆಡ್ ನಾಮಪತ್ರ ಸಲ್ಲಿಸಿದ್ದು, ಸುಮಂಗಳಾ ಪರವಾಗಿ 46 ಹಾಗೂ ಜೆಸಿಂತಾ ಪರವಾಗಿ 14 ಮತಗಳು ಚಲಾವಣೆಯಾದವು. ಎಸ್ ಡಿಪಿಐ ನ ಇಬ್ಬರು ಸದಸ್ಯರು ತಟಸ್ಥವಾಗುಳಿದರು. ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪ ಹಾಗೂ ಉಪ ಆಯುಕ್ತರಾದ ಡಾ.ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

ಮೇಯರ್‌ ಸ್ಥಾನವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಉಪ ಮೇಯರ್‌ ಸ್ಥಾನವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ನೀಡುವ ಮೂಲಕ ಪಕ್ಷದಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದೆ.

- Advertisement -

Latest News

error: Content is protected !!