Wednesday, May 15, 2024
Homeಕರಾವಳಿಮಂಗಳೂರು: ಪಂಪ್‌ವೆಲ್ ರಸ್ತೆ ಮಧ್ಯೆ ಮೂಡಿದ ಬಿರುಕು; ನೀರು ಹೊರಚಿಮ್ಮುವುದರಿಂದ ಸಂಚಾರ ಅಸ್ತವ್ಯಸ್ತ

ಮಂಗಳೂರು: ಪಂಪ್‌ವೆಲ್ ರಸ್ತೆ ಮಧ್ಯೆ ಮೂಡಿದ ಬಿರುಕು; ನೀರು ಹೊರಚಿಮ್ಮುವುದರಿಂದ ಸಂಚಾರ ಅಸ್ತವ್ಯಸ್ತ

spot_img
- Advertisement -
- Advertisement -

ಮಂಗಳೂರು: ನಗರದ ಪಂಪ್‌ವೆಲ್ ಬಸ್ಸು ನಿಲುಗಡೆಯಾಗುವ ಸಮೀಪದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಒಳಗಡೆಯಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಚಿಮ್ಮುತ್ತಿದೆ.

ಬಿರುಕು ಬಿಟ್ಟಿರುವ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ರಸ್ತೆಯಲ್ಲೆಲ್ಲಾ ಹರಿದಾಡುತ್ತಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಈ ದಾರಿಯಲ್ಲಿ ತೆರಳುವುದಕ್ಕೆ ಹರಸಾಹಸ ಪಡುತ್ತಿದ್ದಾರೆ.

ಇನ್ನೂ ರಸ್ತೆಯ ಕೆಳಭಾಗದಲ್ಲಿರುವ ನೀರು ಸರಬರಾಜಿನ ಪೈಪ್ ಒಡೆದಿದ್ದರಿಂದ ರಸ್ತೆ ಮಧ್ಯೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಪಂಪ್‌ವೆಲ್ ಮೇಲ್ಸ್ತುವೆಯ ಕೆಳಭಾಗದಿಂದ ಕಂಕನಾಡಿಯಿಂದ ಪಡೀಲ್‌ಗೆ ಹೋಗುವ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.

- Advertisement -
spot_img

Latest News

error: Content is protected !!