- Advertisement -
![]()
- Advertisement -
ಮಂಗಳೂರು: ಉದ್ದಿಮೆ ಪರವಾನಗಿಯನ್ನು ನವೀಕರಿಸದ ಮಳಿಗೆಗಳ ಮೇಲೆ ಮಂಗಳೂರು ಮಹಾನಗರ ಪಾಲಿಕೆಯಿಂದ ದಾಳಿ ನಡೆಸಲಾಗಿದೆ.ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್, ಪಾಲಿಕೆ ವ್ಯಾಪ್ತಿಯಲ್ಲಿನ ಟ್ರೇಡ್ ಲೈಸೆನ್ಸ್ ನವೀಕರಿಸದ ವ್ಯಾಪಾರ ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ.
ಫಿಝಾ ಬೈ ನೆಕ್ಸ್ ಮಾಲ್ ಹಾಗು ಟೋಕಿಯಾ ಮಾರ್ಕೆಟ್ ಗಳಿಗೆ ಮೇಯರ್ ಮನೋಜ್ ಕುಮಾರ್ ಹಠಾತ್ ಭೇಟಿ ನೀಡಿ, ಟ್ರೇಡ್ ಲೈಸೆನ್ಸ್ ನವೀಕರಿಸದ ಅಂಗಡಿಗಳಿಗೆ ಬೀಗ ಜಡಿದಿದ್ದಾರೆ.
ವ್ಯಾಪಾರ ಮಳಿಗೆಗಳಿಗೆ ಹಲವು ಬಾರಿ ಪರವಾನಗಿ ನವೀಕರಣಕ್ಕೆ ಪಾಲಿಕೆ ವತಿಯಿಂದ ಸೂಚಿಸಲಾಗಿತ್ತಾದರೂ, ಹಲವು ಮಳಿಗೆಗಳಲ್ಲಿ ನವೀಕರಣ ಮಾಡದೇ ವ್ಯಾಪಾರ ನಡೆಸುತ್ತಿದ್ದ ಬಗ್ಗೆ ದೂರುಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಇಂದು ದಿಢೀರ್ ದಾಳಿ ನಡೆಸಲಾಗಿದೆ.
- Advertisement -


