Wednesday, June 24, 2026
Homeಕರಾವಳಿಮಂಗಳೂರುಮಂಗಳೂರು:ಒಬ್ಬ ಮಹಿಳೆಯ ದಾಖಲೆ ಬಳಸಿ ನಕಲಿ ಪಾಸ್ ಪೋರ್ಟ್ ಮಾಡಿಸಿ ವಿದೇಶಕ್ಕೆ ತೆರಳಿದ ಮತ್ತೊಬ್ಬ ಮಹಿಳೆ;...

ಮಂಗಳೂರು:ಒಬ್ಬ ಮಹಿಳೆಯ ದಾಖಲೆ ಬಳಸಿ ನಕಲಿ ಪಾಸ್ ಪೋರ್ಟ್ ಮಾಡಿಸಿ ವಿದೇಶಕ್ಕೆ ತೆರಳಿದ ಮತ್ತೊಬ್ಬ ಮಹಿಳೆ; ಹಲವರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು:ಒಬ್ಬ ಮಹಿಳೆಯ ದಾಖಲೆ ಬಳಸಿ ನಕಲಿ ಪಾಸ್ ಪೋರ್ಟ್ ಮಾಡಿಸಿ ಮತ್ತೊಬ್ಬ ಮಹಿಳೆ ವಿದೇಶಕ್ಕೆ ತೆರಳಿದ ಘಟನೆ  ಉಳ್ಳಾಲದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

ಉಳ್ಳಾಲ ಬೈಲ್ ನಿವಾಸಿ ಯಶೋಧ ಕೇಶವ ಎಂಬುವವರ ಹೆಸರಿನಲ್ಲಿ ಪ್ರೀತಾ ಡಿ ಸೋಜಾ ಎಂಬಾಕೆ ಪಾಸ್‌ಪೋರ್ಟ್ (ನಂ. ಸಿ4042172) ಹೊಂದಿ ವಿದೇಶಕ್ಕೆ ಪ್ರಯಾಣಿಸಿರುವ ಬಗ್ಗೆ ಪೊಲೀಸರಿಗೆ ಗೌಪ್ಯ ಮಾಹಿತಿ ಲಭಿಸಿತ್ತು. ಪಾಸ್‌ಪೋರ್ಟ್ ಅರ್ಜಿಯನ್ನು (BNX067061521924) ಕೂಲಂಕಷವಾಗಿ ಪರಿಶೀಲಿಸಿದಾಗ, ಅದರಲ್ಲಿರುವ ಹೆಸರು ಮತ್ತು ವಿಳಾಸ ಯಶೋಧ ಕೇಶವ ಅವರದ್ದಾಗಿದ್ದರೂ, ಭಾವಚಿತ್ರ ಮಾತ್ರ ಪ್ರೀತಾ ಡಿ ಸೋಜಾ ಎಂಬಾಕೆಯದ್ದೆಂದು ದೃಢಪಟ್ಟಿದೆ.

ವಂಚನೆಯ ಜಾಲ:

ಪ್ರೀತಾ ಡಿ ಸೋಜಾ ಎಂಬಾಕೆಯನ್ನು ಇಸ್ರೇಲ್‌ಗೆ ಕಳುಹಿಸುವ ಉದ್ದೇಶದಿಂದ ಉಳ್ಳಾಲ ನಿವಾಸಿ ಪ್ರೇಮ್ ಡಿ ಸೋಜ ಎಂಬಾತ ಈ ಒಳಸಂಚು ರೂಪಿಸಿದ್ದ ಎನ್ನಲಾಗಿದೆ. ಯಶೋಧಾ ಕೇಶವ ಅವರ ಶೈಕ್ಷಣಿಕ ಅಥವಾ ವಿಳಾಸದ ದಾಖಲೆಗಳನ್ನು ಪಡೆದು, ಅದಕ್ಕೆ ಪ್ರೀತಾ ಅವರ ಫೋಟೋ ಅಂಟಿಸಿ ಅಧಿಕಾರಿಗಳನ್ನು ದಾರಿ ತಪ್ಪಿಸಲಾಗಿದೆ. ಈ ಅಕ್ರಮ ಪಾಸ್‌ಪೋರ್ಟ್ ಬಳಸಿಕೊಂಡು ಪ್ರೀತಾ ಡಿ ಸೋಜಾ ಅವರು ಮಾರ್ಚ್ 17, 2025 ರಂದು ಮುಂಬೈ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಹಾರಿದ್ದಾರೆ.

ದಾಖಲೆ ನೀಡಿದ ಮಹಿಳೆಯೂ ಸಂಕಷ್ಟಕ್ಕೆ:

ಪೊಲೀಸ್ ತನಿಖೆಯ ವೇಳೆ ಅಸಲಿ ಯಶೋಧಾ ಕೇಶವ ಅವರು ಪ್ರಸ್ತುತ ಉಳ್ಳಾಲದಲ್ಲೇ ವಾಸವಿರುವುದು ಕಂಡುಬಂದಿದೆ. ಆದರೆ, ಪ್ರೀತಾ ಡಿ ಸೋಜಾ ಅವರಿಗೆ ಅಕ್ರಮವಾಗಿ ಪಾಸ್‌ಪೋರ್ಟ್ ಪಡೆಯಲು ಯಶೋಧಾ ಅವರೇ ಸ್ವತಃ ದಾಖಲೆಗಳನ್ನು ಒದಗಿಸಿ ಸಹಕರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರೀತಾ ಡಿ ಸೋಜಾ, ಪ್ರೇಮ್ ಡಿ ಸೋಜಾ ಹಾಗೂ ಸಹಕರಿಸಿದ ಯಶೋಧ ಕೇಶವ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಈ ಅಕ್ರಮ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ತನಿಖೆ ಚುರುಕುಗೊಂಡಿದೆ.

- Advertisement -

Latest News

error: Content is protected !!