Friday, June 5, 2026
Homeಕರಾವಳಿಖಾಸಗೀಕರಣದತ್ತ ಮಂಗಳೂರು ವಿಮಾನ ನಿಲ್ದಾಣ!…ಅದಾನಿ ಸಮೂಹ ಸಂಸ್ಥೆ ಪಾಲಾಗುತ್ತಾ ಕುಡ್ಲದ ಏರ್ಪೋರ್ಟ್?

ಖಾಸಗೀಕರಣದತ್ತ ಮಂಗಳೂರು ವಿಮಾನ ನಿಲ್ದಾಣ!…ಅದಾನಿ ಸಮೂಹ ಸಂಸ್ಥೆ ಪಾಲಾಗುತ್ತಾ ಕುಡ್ಲದ ಏರ್ಪೋರ್ಟ್?

- Advertisement -
- Advertisement -

ಮಂಗಳೂರು:ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಮಹತ್ವದ ಯೋಜನೆ ಇದೀಗ ಅಂತಿಮ ಹಂತದಲ್ಲಿದೆ.ಮುಂದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಗೆ ಹಸ್ತಾಂತರವಾಗಲಿದೆ.
ಹಿಂದಿನ 69 ವರ್ಷಗಳಿಂದ ಸರಕಾರಿ ಸ್ವಾಮ್ಯದಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣ ಈಗ ಖಾಸಗೀಕರಣಗೊಳ್ಳಲಿದೆ.ನಂತರದಲ್ಲಿ ಏರ್‌ಪೋರ್ಟ್‌ ನಿರ್ವಹಣೆಯ ಹೊಣೆಯನ್ನು ಅದಾನಿ ಸಂಸ್ಥೆಗೆ ಅಧಿಕೃತವಾಗಿ ಹಸ್ತಾಂತರಿಸಲಾಗುವುದು.ನವಂಬರ್ ಆರಂಭದಿಂದ ಹಸ್ತಾಂತರ ವಾದರೂ ಮುಂದಿನ ಒಂದೆರಡು ವರ್ಷ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಸಂಸ್ಥೆ ಸಮಾನಾಂತರ ಜವಾಬ್ದಾರಿ ಯೊಂದಿಗೆ ಕಾರ್ಯ ನಿರ್ವಹಿಸಲಿವೆ.

ಈ ಸಮಯದಲ್ಲಿ ನಿಲ್ದಾಣ ಸಂಬಂಧಿತ ವಿಚಾರದಲ್ಲಿ ಹಣ ವಿನಿಯೋಗ, ಟರ್ಮಿನಲ್‌ನಲ್ಲಿ ವಾಣಿಜ್ಯ ಚಟುವಟಿಕೆ, ಲಾಭ-ನಷ್ಟ ವ್ಯವಹಾರವನ್ನೂ ಅದಾನಿ ಸಂಸ್ಥೆಯೇ ನೋಡಿಕೊಳ್ಳಲಿದೆ. ಪ್ರಾಧಿಕಾರವು ವಿಮಾನ ಆಗಮನ-ನಿರ್ಗಮನದ ವಿಚಾರಕ್ಕೆ ಆದ್ಯತೆ ನೀಡಿ ಒಟ್ಟು ವ್ಯವಸ್ಥೆಯ ಬಗ್ಗೆ ಮಾರ್ಗದರ್ಶಕ ಸ್ಥಾನದಲ್ಲಿರಲಿದೆ.

- Advertisement -

Latest News

error: Content is protected !!