Monday, June 8, 2026
Homeಕರಾವಳಿಮಂಗಳೂರುಮಂಗಳೂರು; ಮದ್ಯದ ನಶೆಯಲ್ಲಿ ಮೋರಿಗೆ ಬಿದ್ದ ಕುಡುಕ

ಮಂಗಳೂರು; ಮದ್ಯದ ನಶೆಯಲ್ಲಿ ಮೋರಿಗೆ ಬಿದ್ದ ಕುಡುಕ

- Advertisement -
- Advertisement -

ಮಂಗಳೂರು; ಮದ್ಯದ ನಶೆಯಲ್ಲಿ ಕುಡುಕನೊಬ್ಬ ಮೋರಿಗೆ ಬಿದ್ದ ಘಟನೆ ಮಂಗಳೂರಿನ ಪಂಪ್‌ವೆಲ್ ಬಳಿ ಇಂದು(ಜು.26) ಬೆಳಗ್ಗೆ ನಡೆದಿದೆ.

ಫುಲ್ ಟೈಟ್ ಆಗಿದ್ದ ಕುಡುಕ ಆರೇಳು ಅಡಿ ಆಳವಿದ್ದ ಮೋರಿಗೆ ಬಿದ್ದಿದ್ದಾನೆ. ಮಳೆಯಿಂದಾಗಿ ಮೋರಿ ತುಂಬಿ ಹರಿಯುತ್ತಿತ್ತು. ಕೂಡಲೇ ಅಲ್ಲಿದ್ದ ಸಂಚಾರಿ ಪೊಲೀಸರಿಬ್ಬರು ಆತನನ್ನು ಮೇಲಕ್ಕೆತ್ತಿದ್ದಾರೆ.

ಮಂಗಳೂರು ನಗರ ಜೆಪ್ಪಿನಮೊಗರು ಸಂಚಾರಿ ಠಾಣೆಯ ಹೆಡ್ ಕಾನ್‌ಸ್ಟೇಬಲ್ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿ ವಿಲ್ಸನ್ ಫೆರ್ನಾಂಡಿಸ್ ಸ್ವತಃ ಮೋರಿಗಿಳಿದು ಹರಸಾಹಪಟ್ಟು ಆತನನ್ನು ರಕ್ಷಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಸಾರ್ವಜನಿಕರು ಸಾಥ್ ನೀಡಿದ್ರು.

- Advertisement -

Latest News

error: Content is protected !!