ಪುತ್ತೂರು; ಕರ್ತವ್ಯ ನಿರತ ಸಂಪ್ಯ ಠಾಣೆ ಎಸ್ ಐ ಮೇಲೆ ವ್ಯಕ್ತಿಯೊಬ್ಬ ಹಲ್ಲೆಗೆ ಯತ್ನಿಸಿರುವ ಘಟನೆ ಫೆಬ್ರವರಿ 9ರಂದು ಸಂಪ್ಯ ಗ್ರಾಮಾಂತರ ಠಾಣೆಯ ಮುಂದೆ ನಡೆದಿದೆ. ಪ್ರತಾಪ್ ಗೌಡ ಹಲ್ಲೆಗೆ ಯತ್ನಿಸಿದ ವ್ಯಕ್ತಿ.
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ, ಹಿಂಬದಿ ಸವಾರ ಹೆಲ್ಮೆಟ್ ಧರಿಸದೇ ಇರುವ ಕಾರಣಕ್ಕಾಗಿ ರೇಮಂತ್ ಎಸ್ ಎಂಬವರ ಸ್ಕೂಟರ್ ರನ್ನು ತಡೆದು, ದಂಡ ಪಾವತಿಸುವಂತೆ ಹೇಳಿದಾಗ ಸ್ಕೂಟರ್ ನ ಹಿಂಬದಿ ಕುಳಿತಿದ್ದ ಪ್ರತಾಪ್ ಗೌಡ ಎಂಬಾತ ಕೆಳಗಿಳಿದು ಬಂದು ಪೋಲಿಸ್ ಅಧಿಕಾರಿಗಳಿಗೆ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿ, ಪೊಲೀಸ್ ಅಧಿಕಾರಿ, ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೇ ಹಲ್ಲೆಗೆ ಯತ್ನಿಸಿದ್ದಾನೆ.
ಆರೋಪಿ ಪ್ರತಾಪ್ ಗೌಡ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈತನ ಮೇಲೆ ಕಾವೂರು ಠಾಣೆಯಲ್ಲಿ ಹಾಗೂ ಪುತ್ತೂರು ಠಾಣೆಯಲ್ಲಿ ಸೇರಿ ಒಟ್ಟು ನಾಲ್ಕು ಕೇಸುಗಳು ದಾಖಲಾಗಿವೆ.