Wednesday, June 3, 2026
Homeಕರಾವಳಿಸುಳ್ಯ; ನಾನು ಕೆನರಾ ಬ್ಯಾಂಕ್ ಉದ್ಯೋಗಿ ಎಂದು ವಂಚಿಸಲು ಯತ್ನ

ಸುಳ್ಯ; ನಾನು ಕೆನರಾ ಬ್ಯಾಂಕ್ ಉದ್ಯೋಗಿ ಎಂದು ವಂಚಿಸಲು ಯತ್ನ

- Advertisement -
- Advertisement -

ಸುಳ್ಯ; ನಾನು ಕೆನರಾ ಬ್ಯಾಂಕ್ ಉದ್ಯೋಗಿ ಎಂದು ಹೇಳಿ ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿ ವಂಚಿಸಲು ಯತ್ನಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯದಲ್ಲಿ ಅಪ್ಪಯ್ಯ ನೀರಬಿದಿರೆ ಎಂಬವರು ಟೈಲರ್‌ ವೃತ್ತಿ ಮಾಡುತ್ತಿದ್ದು ಶನಿವಾರ ಬೆಳಗ್ಗೆ ಮಲಯಾಳಂ ಮಾತನಾಡುವ ಅಪರಿಚಿತ ವ್ಯಕ್ತಿ ಬಂದು ನನಗೆ ನಿಮ್ಮ ಪರಿಚಯ ಇದೆ.

ನಿಮ್ಮ ಮಗಳನ್ನು ಮದುವೆ ಮಾಡಿಕೊಟ್ಟ ಕಡೆಯವರು ನನಗೆ ಸಂಬಧಿಕರು ಎಂದು ಹೇಳಿ, ಇವತ್ತು ನನಗೆ ಬ್ಯಾಂಕಿಗೆ 1.5 ಲಕ್ಷ ರೂ. ಪ್ರಧಾನಿ ಮೋದಿಯವರ ಹಣ ಬಿಡುಗಡೆಯಾಗಲಿದೆ. ಈಗ ನಾನು ತುರ್ತಾಗಿ ಏಳೂವರೆ ಸಾವಿರ ಬ್ಯಾಂಕಿಗೆ ಪಾವತಿ ಮಾಡಬೇಕಾಗಿದೆ. ನಿಮ್ಮ ಬಳಿ ಹಣ ಇದ್ದರೆ ಈಗ ನನಗೆ ಏಳೂವರೆ ಸಾವಿರ ಕೊಡಿ. ಬ್ಯಾಂಕಿನಿಂದ ಹಣ ಬಿಡುಗಡೆಯಾದ ಕೂಡಲೇ ನಿಮಗೆ ಹಿಂದಿರುಗಿಸುತ್ತೇನೆ ಎಂದು ಹೇಳಿದ್ದಾನೆ. ನಾನು ಕೆನರಾ ಬ್ಯಾಂಕ್‌ ಉದ್ಯೋಗಿ ಎಂದು ಹೇಳಿ ನಂಬಿಸಲು ಯತ್ನಿಸಿದ್ದಾನೆ.

ಅಪ್ಪಯ್ಯರಿಗೆ ಅಪರಿಚಿತನ ಮಾತಿನಲ್ಲಿ ನಂಬಿಕೆ ಬಾರದ ಹಿನ್ನೆಲೆಯಲ್ಲಿ ಅವರು ಮಗಳಿಗೆ ಕರೆ ಮಾಡಿ ವಿಚಾರಿಸಿದರು. ಗಂಡನ ಪೈಕಿ ಕೆನರಾ ಬ್ಯಾಂಕ್‌ ಉದ್ಯೋಗಿ ಯಾರೂ ಇಲ್ಲ ಎಂದು ತಿಳಿಸಿದರು. ಮೋಸ ಹೋಗುವ ಬಗ್ಗೆ ತಿಳಿದ ಅಪ್ಪಯ್ಯ ಅವರು ನನ್ನ ಬಳಿ ಹಣ ಇಲ್ಲ. ನಿಮ್ಮ ಪರಿಚಯ ನನಗೆ ಇಲ್ಲವೆಂದು ತಿಳಿಸಿದರು. ಹಣ ಸಿಗದ ಹಿನ್ನೆಲೆಯಲ್ಲಿ ವಂಚಕ ಅಲ್ಲಿಂದ ತೆರಳಿದ್ದಾನೆ.

- Advertisement -

Latest News

error: Content is protected !!