Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ :ಅತೀ ವೇಗದಲ್ಲಿ ಚಲಿಸುತ್ತಿದ್ದ ಆಲ್ಟೊ ಕಾರು ಪಾದಚಾರಿಗೆ ಡಿಕ್ಕಿ ; ಗಂಭೀರ ಗಾಯ

ಬೆಳ್ತಂಗಡಿ :ಅತೀ ವೇಗದಲ್ಲಿ ಚಲಿಸುತ್ತಿದ್ದ ಆಲ್ಟೊ ಕಾರು ಪಾದಚಾರಿಗೆ ಡಿಕ್ಕಿ ; ಗಂಭೀರ ಗಾಯ

- Advertisement -
- Advertisement -

ಬೆಳ್ತಂಗಡಿ : ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯ ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ರುಕ್ಮಯ ಗೌಡ (53ವ) ಅವರಿಗೆ ಅತೀ ವೇಗವಾಗಿ ಚಲಿಸುತ್ತಿದ್ದ KL-58-E-4633 ನೊಂದಣಿ ಸಂಖ್ಯೆಯ ಆಲ್ಟೋ ಕಾರು ಡಿಕ್ಕಿ ಹೊಡೆದ ಘಟನೆ ಎ.29 ರಾತ್ರಿ ನಡೆಯಿತು.

ಅತೀ ವೇಗವಾಗಿ ಚಲಾಯಿಸಿ ಕೊಂಡು ಬಂದು ಡಿಕ್ಕಿ ಹೊಡೆದು ಪರಿಣಾಮ ರುಕ್ಮಯ ಅವರ ಕಾಲು,ತಲೆ,ಮುಖಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ. ಸ್ಥಳೀಯರು ತಕ್ಷಣ ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ರಾತ್ರಿ ಮಂಗಳೂರು ಆಸ್ಪತ್ರೆಗೆ ಸೇರಿಸಲಾಯಿತು.

ಘಟನೆ ವಿವರ: ಉಪ್ಪಿನಂಗಡಿ ಕಡೆಯಿಂದ ಬಳೆಂಜ ಕಾಫಿನಡ್ಕ ಸಮೀಪದ ನಿವಾಸಿಗಳು ಮೂರು ಕಾರುಗಳು ಒಂದರ ಹಿಂದೆ ಒಂದರಂತೆ ಹಿಂದಿಕ್ಕಿಲು ಭರಾಟೆ ಯಲ್ಲಿ ಬರುತ್ತಿದ್ದ ಕಾರೊಂದು ರುಕ್ಮಯ ಅವರಿಗೆ ಡಿಕ್ಕಿ ಹೊಡೆದ ಘಟನೆ ನಡೆಯಿತು ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.ಬೆಳ್ತಂಗಡಿ ಸಂಚಾರಿ ಪೋಲಿಸ್ ಠಾಣೆಯಲ್ಲಿ ಎ.30 ರಂದು ದೂರು ದಾಖಲಿಸಿ ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!