Saturday, June 6, 2026
Homeಕರಾವಳಿಮಂಗಳೂರುಕಡಬ; ಗಾರೆ ಕೆಲಸಕ್ಕೆಂದು ಹೋದ ಬಳ್ಪದ ವ್ಯಕ್ತಿ  ನಾಪತ್ತೆ

ಕಡಬ; ಗಾರೆ ಕೆಲಸಕ್ಕೆಂದು ಹೋದ ಬಳ್ಪದ ವ್ಯಕ್ತಿ  ನಾಪತ್ತೆ

- Advertisement -
- Advertisement -

ಕಡಬ; ಗಾರೆ ಕೆಲಸಕ್ಕೆಂದು ಹೋದ ಬಳ್ಪದ ವ್ಯಕ್ತಿ  ನಾಪತ್ತೆಯಾಗಿರುವ ಘಟನೆ ನಡೆದಿದೆ. ಕಡಬ ತಾಲೂಕು ಬಳ್ಪ ಗ್ರಾಮದ ಜೋಗಿ ಮನೆ ಚೆನ್ನಕೇಶವ ಜೋಗಿ(61) ನಾಪತ್ತೆಯಾದವರು. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೆನ್ನಕೇಶವ ಅವರು  ಮಾ.11  ರಂದು ತನ್ನ ಮನೆಯಿಂದ ಕೋಡಿಂಬಾಳಕ್ಕೆ ಗಾರೆ ಕೆಲಸಕ್ಕೆ ಹೋಗುವುದಾಗಿ ಹೋದವರು ಇಲ್ಲಿಯ ತನಕ ಹಿಂತಿರುಗಿ ಬರಲಿಲ್ಲ. ಇವರ ಬಳಿ ಇದ್ದ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಎಂದು ಬರುತ್ತಿದೆ  ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮನೆಯಿಂದ ಹೊರ ಹೋಗುವ ವೇಳೆ  ಉದ್ದ ತೋಳಿನ ಹಸಿರು ಬಣ್ಣದ ಶರ್ಟ್,ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.ಕನ್ನಡ, ತುಳು, ಮಲಯಾಳಂ  ಭಾಷೆ ಮಾತನಾಡುತ್ತಾರೆ. ಮಾಹಿತಿ ಸಿಕ್ಕಿದಲ್ಲಿ ಸುಬ್ರಹ್ಮಣ್ಯ ಠಾಣೆಗೆ ತಿಳಿಸುವಂತೆ ಕೋರಲಾಗಿದೆ .

- Advertisement -

Latest News

error: Content is protected !!