Saturday, June 6, 2026
Homeಕರಾವಳಿಪುತ್ತೂರಿನಲ್ಲಿ ತಮ್ಮನನ್ನೇ ಕೊಂದ ಅಣ್ಣ

ಪುತ್ತೂರಿನಲ್ಲಿ ತಮ್ಮನನ್ನೇ ಕೊಂದ ಅಣ್ಣ

- Advertisement -
- Advertisement -

ಪುತ್ತೂರು;  ಅಣ್ಣನೇ ತಮ್ಮನನ್ನು ಕೊಲೆ ಮಾಡಿದ ಘಟನೆ ಪುತ್ತೂರಿನ ಕೆಮ್ಮಿಂಜೆ ಬಳಿ ನಡೆದಿದೆ. ಹಾವೇರಿ ಹೊಸೂರು ಮೂಲದ ನಿಂಗನಗೌಡ ಎಂಬಾತ ತನ್ನ ತಮ್ಮ ಮಾದೇವಪ್ಪನಿಗೆ ಕೊಲೆ ಮಾಡಿದ್ದಾನೆ. ಇಬ್ಬರು ಹಾವೇರಿ ಮೂಲದವರಾಗಿದ್ದು ಪುತ್ತೂರಿನ ಕೆಮ್ಮಿಂಜೆ ಬಳಿ ಕೂಲಿ ಕೆಲಸ ಮಾಡುತ್ತಿದ್ದರು.

ನಿನ್ನೆ ಕಂಠಪೂರ್ತಿ ಕುಡಿದು ಬಂದ ಸಹೋದರರು ಜಗಳ ಮಾಡಿದ್ದಾರೆ.ಈ ವೇಳೆ ಜಗಳ ತಾರಕಕ್ಕೇರಿ ನಿಂಗನಗೌಡ ಮಾದೇವಪ್ಪನಿಗೆ ಹಲ್ಲೆ ಮಾಡಿದ್ದಾನೆ.ಗಂಭೀರವಾಗಿ ಗಾಯಗೊಂಡಿದ್ದ ಮಹದೇವಪ್ಪನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!