Wednesday, June 3, 2026
Homeಕರಾವಳಿಉಡುಪಿಕಾರ್ಕಳ : ಮದ್ಯವೆಂದು ವಾಹನದ ಬ್ರೇಕ್‌ ಪ್ಯೂಡ್‌ ಆಯಿಲ್‌ ಸೇವಿಸಿದ್ದ ವ್ಯಕ್ತಿ ಸಾ*ವು

ಕಾರ್ಕಳ : ಮದ್ಯವೆಂದು ವಾಹನದ ಬ್ರೇಕ್‌ ಪ್ಯೂಡ್‌ ಆಯಿಲ್‌ ಸೇವಿಸಿದ್ದ ವ್ಯಕ್ತಿ ಸಾ*ವು

- Advertisement -
- Advertisement -

ಕಾರ್ಕಳ : ಮದ್ಯವೆಂದು ವಾಹನದ ಬ್ರೇಕ್‌ ಪ್ಯೂಡ್‌ ಆಯಿಲ್‌ ಸೇವಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾ*ವನ್ನಪ್ಪಿರುವ ಘಟನೆ ಮುದ್ರಾಡಿಯ ಬಲ್ಲಾಡಿಯಲ್ಲಿ ನಡೆದಿದೆ. ಹೆಬ್ರಿ ಗ್ರಾಮದ ತಮ್ಮು ಪೂಜಾರಿ (78) ಮೃತ ದುರ್ದೈವಿ.

ತಮ್ಮು ಪೂಜಾರಿ ಅವರಿಗೆ ಮದ್ಯಪಾನದ ಅಭ್ಯಾಸವಿದ್ದು, ಮಧ್ಯಾಹ್ನ ಮನೆಯಲ್ಲಿದ್ದ ವಾಹನದ ಬ್ರೇಕ್‌ ಪ್ಯೂಡ್‌ ಆಯಿಲ್‌ ಅನ್ನು ಮದ್ಯಪಾನವೆಂದು ಭಾವಿಸಿ ಸೇವಿಸಿದ್ದರು.ಅಸ್ವಸ್ಥಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಡಿ. 2ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!