Sunday, June 7, 2026
Homeತಾಜಾ ಸುದ್ದಿಯೂಟ್ಯೂಬ್ ವಿಡಿಯೋ ನೋಡಿ ಸೋರೆಕಾಯಿ ಜ್ಯೂಸ್ ಮಾಡಿ ಕುಡಿದ ವ್ಯಕ್ತಿ ಸಾವು

ಯೂಟ್ಯೂಬ್ ವಿಡಿಯೋ ನೋಡಿ ಸೋರೆಕಾಯಿ ಜ್ಯೂಸ್ ಮಾಡಿ ಕುಡಿದ ವ್ಯಕ್ತಿ ಸಾವು

- Advertisement -
- Advertisement -

ಮಧ್ಯಪ್ರದೇಶ:  ಯೂಟ್ಯೂಬ್ ವಿಡಿಯೋ ನೋಡಿ ಸೋರೆಕಾಯಿ ಜ್ಯೂಸ್ ಮಾಡಿ ಕುಡಿದ ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡು ಸಾವನ್ನಪ್ಪಿದ  ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಖಂದ್ವಾ ಜಿಲ್ಲೆಯ ಸ್ವರ್ಣಬಾಘ್​ ಕಾಲನಿಯ ನಿವಾಸಿ, ವೃತ್ತಿಯಲ್ಲಿ ಚಾಲಕನಾಗಿರುವ ಧರ್ಮೇಂದ್ರ ಕೊರೊಲೆ (32) ಮೃತ ದುರ್ದೈವಿ.

ಯೂಟ್ಯೂಬ್ ವಿಡಿಯೋದಲ್ಲಿ ತೋರಿಸಿದಂತೆ ಧರ್ಮೇಂದ್ರ ಕಾಡೊಂದರಿಂದ ಸೋರೆಕಾಯಿ ಸಂಗ್ರಹಿಸಿದ್ದರು. ಬಳಿಕ ಅದನ್ನು ಜ್ಯೂಸ್ ಮಾಡಿ ಸೇವಿಸಿದರು. ಜ್ಯೂಸ್ ಮಾಡಿದ ಬೆನ್ನಲ್ಲೇ ಅವರು ವಾಂತಿ ಮತ್ತು ಸುಸ್ತಿನಿಂದ ಬಳಲಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ  ಅವರು ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!