Monday, April 29, 2024
Homeಕರಾವಳಿಮಂಗಳೂರು ; ತಾನು ಯೋಧ ಎಂದು ಹೇಳಿಕೊಂಡು ಮಹಿಳಾ ವೈದ್ಯೆಗೆ 2 ಲಕ್ಷ ವಂಚಿಸಿದ ಖದೀಮ

ಮಂಗಳೂರು ; ತಾನು ಯೋಧ ಎಂದು ಹೇಳಿಕೊಂಡು ಮಹಿಳಾ ವೈದ್ಯೆಗೆ 2 ಲಕ್ಷ ವಂಚಿಸಿದ ಖದೀಮ

spot_img
- Advertisement -
- Advertisement -

ಮಂಗಳೂರು ; ತಾನು ಯೋಧ ಎಂದು ಹೇಳಿಕೊಂಡು  ಖದೀಮನೊಬ್ಬ ಯೋಧರಿಗೆ ಚಿಕಿತ್ಸೆ ಕೊಡಲು ನಿಮ್ಮ ಸಹಕಾರ ಬೇಕು ಎಂದು ಹೇಳಿ ಸುರತ್ಕಲ್‌ನ ಮಹಿಳಾ ವೈದ್ಯರೊಬ್ಬರ ಖಾತೆಯಿಂದ 2 ಲಕ್ಷ ರೂ. ಡ್ರಾ ಮಾಡಿ ವಂಚಿಸಿದ  ಘಟನೆ ಸುರತ್ಕಲ್ ನಲ್ಲಿ ಫೆ. 26ರಂದು ನಡೆದಿದೆ.

ವೈದ್ಯರು ಕ್ಲಿನಿಕ್‌ನಲ್ಲಿದ್ದಾಗ ಸಂದರ್ಭ ಕರೆ ಮಾಡಿ, ತಾನು ಸೈನ್ಯದಲ್ಲಿ ಅಧಿಕಾರಿಯಾಗಿದ್ದು ನಮ್ಮ ಯೋಧರಿಗೆ ನೀವು ಚಿಕಿತ್ಸೆ ಕೊಡಬೇಕು.ಇದಕ್ಕಾಗಿ ನಿಮಗೆ ರಿಜಿಸ್ಟರ್‌ ನಂಬ್ರ ಕೊಡಲಾಗುವುದು ಎಂದು ಹೇಳಿ ಮೊಬೈಲ್‌ನಲ್ಲಿ ಕೋಡ್‌ ಹಾಕಲು ಹೇಳಿದ್ದಾನೆ. ಮೊದಲ ಬಾರಿ ಹಾಕಿದಾಗ 50 ಸಾವಿರ ರೂ. ಹೀಗೆ ಒಟ್ಟು ಮೂರು ಬಾರಿ ತಲಾ 50 ಸಾ.ರೂ. ಒಂದು ಬಾರಿ 30 ಸಾ.ರೂ. ಹಾಗೂ ಕೊನೆಯ ಬಾರಿ 20 ಸಾ.ರೂ ಡ್ರಾ ಮಾಡಿ ಸಂಪರ್ಕ ಕಡಿತಗೊಳಿಸಿದ್ದಾನೆ ಎನ್ನಲಾಗಿದೆ.

ಈ ಹಿಂದೆಯೂ ಇದೇ ವ್ಯಕ್ತಿ ಸುರತ್ಕಲ್‌ನ ಟಿಫಿನ್‌ ಸೆಂಟರ್‌ ಮಾಲೀಕರನ್ನು ಮೋಸ ಮಾಡಲು ಯತ್ನಿಸಿ ವಿಫಲನಾಗಿದ್ದ ಎನ್ನಲಾಗಿದೆ. ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!