Saturday, May 18, 2024
Homeಕರಾವಳಿಕಾಸರಗೋಡುಕೇರಳದಲ್ಲಿ ಅತ್ತೆಯ ಅಕ್ರಮ ಸಂಬಂಧ ಬಯಲು ಮಾಡಿದ ಸೊಸೆಗೆ ಎಂಥಾ ಶಿಕ್ಷೆ ನೋಡಿ...

ಕೇರಳದಲ್ಲಿ ಅತ್ತೆಯ ಅಕ್ರಮ ಸಂಬಂಧ ಬಯಲು ಮಾಡಿದ ಸೊಸೆಗೆ ಎಂಥಾ ಶಿಕ್ಷೆ ನೋಡಿ…

spot_img
- Advertisement -
- Advertisement -

ಕೇರಳ : ಅತ್ತೆಯ ಅಕ್ರಮ ಸಂಬಂಧವನ್ನು ಬಯಲು ಮಾಡಿದ ಸೊಸೆಯ ಮೇಲೆ ಅತ್ತೆಯ ಪ್ರಿಯಕರ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೇರಳದ ತ್ರಿಸ್ಸೂರ್ ಜಿಲ್ಲೆಯ ಕೊರಟ್ಟಿಯಲ್ಲಿ ನಡೆದಿದೆ. ಪೆರುಂಬವೂರ್​ ಮೂಲದ ಎಂ.ಎಸ್​. ವೈಷ್ಣವಿ ಹಲ್ಲೆಗೊಳಗಾದ ಸೊಸೆ.

ಅಂತಿಮ ವರ್ಷದ ಸಿವಿಲ್​ ಇಂಜಿನಿಯರಿಂಗ್​ ವಿದ್ಯಾರ್ಥಿನಿಯಾಗಿರುವ ವೈಷ್ಣವಿ ಕೊರಟ್ಟಿಯ ಪಲಪಲ್ಲಿ ಮೊಝಿಕುಲಂ ನಿವಾಸಿ ಮುಕೇಶ್​ ಎಂಬುವರನ್ನು 6 ತಿಂಗಳ ಹಿಂದೆ ಮದುವೆ ಆಗಿದ್ದರು. ಪದೇ ಪದೇ ಮನೆಗೆ ಅತ್ತೆಯ ಪ್ರಿಯಕರ ಬರುತ್ತಿದ್ದದ್ದನ್ನು ವೈಷ್ಣವಿ ಪ್ರಶ್ನಿಸಿದ್ದಾರೆ. ಅಲ್ಲದೇ ಮನೆಗೆ ಬಂದಾಗ ತಡೆದಿದ್ದಾಳೆ. ಇದರಿಂದ ಕೋಪಗೊಂಡ ಅತ್ತೆಯ ಪ್ರಿಯಕರ ವೈಷ್ಣವಿ ನೆರೆಹೊರೆಯವರ ಜೊತೆ ಮಾತನಾಡುತ್ತಿದ್ದ ವೇಳೆ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಪತ್ನಿಯನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದ ಪತಿ ಮುಕೇಶ್​ ಮೇಲೂ ಆರೋಪಿ ಹಲ್ಲೆ ಮಾಡಿದ್ದಾನೆ.

ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಆಕೆ ಅಂಗಮಲಿಯಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.

- Advertisement -
spot_img

Latest News

error: Content is protected !!