Friday, May 3, 2024
Homeಕರಾವಳಿಮಂಗಳೂರು: ರೈಲ್ವೇ ನಿಲ್ದಾಣದಲ್ಲಿ ಚಿನ್ನ ಕದ್ದ ಆರೋಪಿಯ ಬಂಧನ

ಮಂಗಳೂರು: ರೈಲ್ವೇ ನಿಲ್ದಾಣದಲ್ಲಿ ಚಿನ್ನ ಕದ್ದ ಆರೋಪಿಯ ಬಂಧನ

spot_img
- Advertisement -
- Advertisement -

ಮಂಗಳೂರು ರೈಲ್ವೇ ನಿಲ್ದಾಣದ  ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಪ್ರಯಾಣಿಕರೊಬ್ಬರಿಂದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಕೋಝಿಕ್ಕೋಡ್ ನಿವಾಸಿ ಫಿರೋಜ್ ಪದವತ್ ಬಂಧಿತ ಆರೋಪಿ.

ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಪ್ರಯಾಣಿಕರೊಬ್ಬರ ಬ್ರಾಸ್ಲೆಟ್ ಮತ್ತು ಚಿನ್ನದ ಸರವನ್ನು ಫಿರೋಜ್ ಕದ್ದಿದ್ದ. ಈ ಸಂಬಂಧ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳತನವಾದ ಆಭರಣಗಳ ಒಟ್ಟು ತೂಕ 48 ಗ್ರಾಂ ಆಗಿದ್ದು, ಮೌಲ್ಯ 2.37 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ಕಣ್ಣೂರು-ಮಂಗಳೂರು ಮೆಮು ರೈಲಿನ ಮೂಲಕ ಮಂಗಳೂರು ಸೆಂಟ್ರಲ್ ರೈಲ್ವೆ ಠಾಣೆಗೆ ಆಗಮಿಸಿದ ಆರೋಪಿಯನ್ನು ಬಂಧಿಸಲಾಗಿದೆ. ಕದ್ದ ಚಿನ್ನಾಭರಣಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

- Advertisement -
spot_img

Latest News

error: Content is protected !!