Wednesday, June 3, 2026
Homeಕರಾವಳಿಬಂಟ್ವಾಳ:  ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯ ಕೈ ಹಿಡಿದು ಎಳೆದಾತ ಅಂದರ್

ಬಂಟ್ವಾಳ:  ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯ ಕೈ ಹಿಡಿದು ಎಳೆದಾತ ಅಂದರ್

- Advertisement -
- Advertisement -

ಬಂಟ್ವಾಳ:  ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯ ಕೈ ಹಿಡಿದು ಎಳೆದಾತನನ್ನು ಪೊಲೀಸರು ಬಂಧಿಸಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಸರಪಾಡಿ ಗ್ರಾಮದ ಕುದ್ಕುಂಜ ನಿವಾಸಿ ಸುಕೇಶ್ ಯಾನೆ ಸಿಕೇಶ ಬಂಧಿತ.

‌ ಶಾಲಾ ಬಾಲಕಿಯೊಬ್ಬಳು ಒಬ್ಬಳೇ ಶಾಲೆಯಿಂದ ಮನೆಗೆ ನಡೆದುಕೊಂಡು ಮನೆಗೆ ಬರುತ್ತಿದ್ದಾಗ ಆರೋಪಿ ಸುಕೇಶ್ ಗೌಡ ಎಂಬಾತ ಬಾಲಕಿಯ ಹಿಂದಿನಿಂದ ಹೋಗಿ ಬಾಲಕಿಯ ಕೈ ಹಿಡಿದು ಎಳೆದಿದ್ದಾನೆ. ಮೊದಲೇ ಇವನ ಗುಣ ನಡತೆಯ ಬಗ್ಗೆ ಅನುಮಾನವಿದ್ದ  ಅಲ್ಲಿನ ರಿಕ್ಷಾ ಚಾಲಕರು ಆತನನ್ನು ಹಿಂಬಾಲಿಸಿದ್ದರು. ಆತ ಬಾಲಕಿಯ  ಕೈ ಹಿಡಿದ ಕೂಡಲೇ ಈತನನ್ನು ರೆಡ್ ಹ್ಯಾಂಡ್ ಆಗಿ ರಿಕ್ಷಾಚಾಲಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  


ವಿಪರೀತ ಕುಡಿತದ ಚಟಕ್ಕೆ ಬಿದ್ದಿರುವ ಸುಕೇಶ್ ಈ ಹಿಂದೆ ಎರಡು ಬಾರಿ ಇದೇ ರೀತಿ ಮಾಡಿ ಸಿಕ್ಕಿ ಬಿದ್ದಿದ್ದ. ಆದರೆ ತನ್ನ ಹಳೇ ಚಾಳಿ ಬಿಟ್ಟಿರಲಿಲ್ಲ. ಇದೀಗ ಆತನನ್ನುರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

- Advertisement -

Latest News

error: Content is protected !!