Wednesday, July 15, 2026
Homeಕರಾವಳಿಉಪ್ಪಿನಂಗಡಿ; ಮೋದಿ ಹೆಸರು ಹೇಳಿ ಹಣ ತೆಗೆದುಕೊಡುತ್ತೇನೆಂದು ವಂಚಿಸುತ್ತಿದ್ದಾತನ ಬಂಧನ

ಉಪ್ಪಿನಂಗಡಿ; ಮೋದಿ ಹೆಸರು ಹೇಳಿ ಹಣ ತೆಗೆದುಕೊಡುತ್ತೇನೆಂದು ವಂಚಿಸುತ್ತಿದ್ದಾತನ ಬಂಧನ

- Advertisement -
- Advertisement -

ಉಪ್ಪಿನಂಗಡಿ; ಮೋದಿ ಹೆಸರು ಹೇಳಿ ಹಣ ತೆಗೆದುಕೊಡುತ್ತೇನೆಂದು ವಂಚಿಸುತ್ತಿದ್ದಾತನನ್ನು ಉಪ್ಪಿನಂಗಡಿಯಲ್ಲಿ ಬಂಧಿಸಲಾಗಿದೆ. ಉಪ್ಪಿನಂಗಡಿಯಲ್ಲಿ ಈ ಹಿಂದೆ ರಸ್ತೆ ಬದಿ ಬನಿಯನ್, ಟೀ ಶರ್ಟ್ ಮಾರುತ್ತಿದ್ದ ಮೂಲತಃ ಕಾಸರಗೋಡಿನವನು ಬಂಧಿತ ಆರೋಪಿ.

ಈತ ಉಪ್ಪಿನಂಗಡಿಯಲ್ಲಿ ಹಲವು ಮಂದಿಯನ್ನು ನಿಮಗೆ ಮೋದಿಯ ಹಣ ತೆಗೆದುಕೊಡುತ್ತೇನೆಂದು ಮಾತಿನಲ್ಲಿ ಮೋಡಿ ಮಾಡಿ ಹಣ,ಚಿನ್ನದ ಸರಗಳನ್ನು ಅವರಿಂದಲೇ ಪಡೆದು ಬಳಿಕ ಪರಾರಿಯಾಗುತ್ತಿದ್ದ ಎನ್ನಲಾಗಿದೆ.ಈತನ ಮಾತಿನ ಮೋಡಿಗೆ ಮರುಳಾಗಿ ಅನೇಕ ಜನ ಹಣ, ಸರ ಕಳೆದುಕೊಳ್ಳುತ್ತಿದ್ದರು. ಅರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!