Wednesday, April 16, 2025
Homeಕರಾವಳಿಬೆಳ್ತಂಗಡಿ : ಕೊಯ್ಯೂರಿನಲ್ಲಿ ಜಾಗದ ತಕರಾರು ಕಾರ್ಮಿಕನ ಮೇಲೆ ಹಲ್ಲೆ: ಆರೋಪಿ ಉಜ್ವಲ್ ಗೌಡ ಬೆಳ್ತಂಗಡಿ...

ಬೆಳ್ತಂಗಡಿ : ಕೊಯ್ಯೂರಿನಲ್ಲಿ ಜಾಗದ ತಕರಾರು ಕಾರ್ಮಿಕನ ಮೇಲೆ ಹಲ್ಲೆ: ಆರೋಪಿ ಉಜ್ವಲ್ ಗೌಡ ಬೆಳ್ತಂಗಡಿ ಪೊಲೀಸ್ ವಶಕ್ಕೆ

spot_img
- Advertisement -
- Advertisement -

ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಆದೂರ್ ಪೆರಾಲ್ ಎಂಬಲ್ಲಿ ಕೂಲಿ ಕೆಲಸ ಮಾಡಲು ಬಂದವರಲ್ಲಿ ಒಬ್ಬನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಆದೂರ್ ಪೆರಾಲ್ ಎಂಬಲ್ಲಿಗೆ ಬೇಲಿಯ ಕೆಲಸಕ್ಕೆಂದು ಸ್ಥಳೀಯ ಆರು ಮಂದಿ ಯುವಕರು ಏ.11 ರಂದು ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ಕೊಯ್ಯೂರು ಗ್ರಾಮದ ಪಾಂಬೇಲು ನಿವಾಸಿ ರಾಮಯ್ಯ ಗೌಡರ ಮಗ ಉಜ್ವಲ್ ಗೌಡ(45) ತಮಗೆ ಸೇರಿದ ಜಾಗ ಇದು ಎಂದು ಬೇಲಿ ಹಾಕುತ್ತಿರುವ ಬಗ್ಗೆ ತಕರಾರು ತೆಗೆದಿದ್ದು ಕಾರ್ಮಿಕ ಕೊಯ್ಯೂರು ಗ್ರಾಮದ ನೀರಕಜೆ ನಿವಾಸಿ ಮಧು(28) ಎಂಬಾತನಿಗೆ ಜಾತಿ ನಿಂದನೆ ಮಾಡಿ ಆತನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಬೆನ್ನು ಮೂಲೆಗೆ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕ ಮಧುನನ್ನು ಬೆಳ್ತಂಗಡಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಏ.11 ರಂದು ಪ್ರಕರಣ ದಾಖಲಾಗಿದ್ದು.ಆರೋಪಿ ಉಜ್ವಲ್ ಗೌಡ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣದ ಬಗ್ಗೆ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!