Wednesday, June 3, 2026
Homeಕರಾವಳಿಮನೆಯಲ್ಲಿ ಜಾರಿ ಬಿದ್ದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಗಂಭೀರ ಗಾಯ

ಮನೆಯಲ್ಲಿ ಜಾರಿ ಬಿದ್ದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಗಂಭೀರ ಗಾಯ

- Advertisement -
- Advertisement -

ಕೊಲ್ಕತ್ತಾ: ಮನೆಯ ಆವರಣದಲ್ಲಿ ಜಾರಿ ಬಿದ್ದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಗಂಭೀರ ಗಾಯಗಳಾಗಿವೆ. ತಮ್ಮ ಮನೆಯ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಎಸ್ ಎಸ್ ಕೆ ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಮತಾ ಅವರ ಹಣೆ ಒಡೆಯುವ ಚಿತ್ರಗಳನ್ನು ತೃಣಮೂಲದ ಎಕ್ಸ್-ಹ್ಯಾಂಡಲ್ (ಮಾಜಿ ಟ್ವಿಟರ್) ನಿಂದ ಬಹಿರಂಗಗೊಳಿಸಲಾಗಿದೆ.ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ತಮ್ಮ ಕಾಲಿಘಾಟ್ ನಿವಾಸದ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಿದ್ದಿದ್ದಾರೆ ಎನ್ನಲಾಗಿದೆ. ಪರಿಣಾಮ ಅವರ ಹಣೆಗೆ ಗಾಯವಾಗಿದೆ,. ತಕ್ಷಣ ಅವರನ್ನು ಕೋಲ್ಕತ್ತಾದ ಎಸ್‌ಎಸ್ಕೆಎಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!